alex Certify ಮದ್ಯಪಾನ ಮಾಡಿ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಕೋರ್ಟ್​ನಿಂದ ಪರಿಹಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಪಾನ ಮಾಡಿ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಕೋರ್ಟ್​ನಿಂದ ಪರಿಹಾರ…..!

ತನ್ನ ಕೆಲಸದ ಅವಧಿಗೂ 9 ಗಂಟೆ ಮುನ್ನ ಬಿಯರ್​ ಕುಡಿದ ಕಾರಣಕ್ಕೆ ಮಹಿಳಾ ಸಿಬ್ಬಂದಿಯನ್ನು ಸೀಫುಡ್​ ಕಾರ್ಖಾನೆಯಿಂದ ತೆಗೆದುಹಾಕಲಾಗಿತ್ತು. ಆದರೆ ಇದೀಗ ಈ ಮಹಿಳೆಗೆ 5.5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿದೆ.

ಸ್ಕಾಟ್ಲೆಂಡ್​​ನ ಎಡಿನ್​ಬರ್ಗ್​ ಲಿವಿಂಗ್​ಸ್ಟನ್​​ನಲ್ಲಿರುವ ಕಾರ್ಖಾನೆಯಿಂದ ಮಾಲ್ಗೋರ್ಜಾಟಾ ಕ್ರೋಲಿಕ್​​​ಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಯಿಂದ ಆಕೆಯ ಶಿಫ್ಟ್​ ಆರಂಭವಾಗುವುದರಲ್ಲಿತ್ತು. ಆದರೆ ಈಕೆ ಮುಂಜಾನೆ 5 ಗಂಟೆ ಸುಮಾರಿಗೆ ಮೂರು ಬಾಟಲಿ ಬಿಯರ್​ ಸೇವನೆ ಮಾಡಿದ್ದಳು.

ಕಂಪನಿಯು ಮದ್ಯಪಾನ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವುದಾಗಿ ಹೇಳಿದೆ. ಈ ಕಾರ್ಖಾನೆಯಲ್ಲಿ ಯಾರ ಶಿಫ್ಟ್​​​ ಇದೆಯೋ ಅವರು ಇಡೀ ದಿನ ಮದ್ಯಸೇವನೆ ಮಾಡಲು ನಿರ್ಬಂಧ ಹೇರಲಾಗಿದೆ.

ಆದರೆ ಕೋರ್ಟ್​ನಲ್ಲಿ ಈ ಪ್ರಕರಣದ ಸಂಬಂಧ ತನಿಖೆ ನಡೆಸಿದ ನ್ಯಾಯಾಧೀಶರು ಇಲ್ಲಿ ಕ್ರೋಲಿಕ್​ಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ ಪಾಳಿಯಲ್ಲಿ ಕೆಲಸ ಮಾಡಿ ರಾತ್ರಿ ಮದ್ಯ ಸೇವನೆ ಮಾಡಬಹುದು ಎಂದಾದರೆ ಮಧ್ಯಾಹ್ನದ ಶಿಫ್ಟ್​ ಇರುವಾಗ ಮುಂಜಾನೆ ಸಮಯದಲ್ಲಿ ಮದ್ಯಪಾನ ಮಾಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಹಾಗೂ ಪರಿಹಾರ ರೂಪದಲ್ಲಿ ಕಾರ್ಖಾನೆಯು 5.5 ಲಕ್ಷ ರೂಪಾಯಿಗಳನ್ನು ಕ್ರೋಲಿಕ್​ಗೆ ನೀಡಬೇಕು ಎಂದು ಹೇಳಿದ್ರು.

ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಈ ಘಟನೆ ಸಂಭವಿಸಿದ್ದು ಇದಕ್ಕೂ ಮುನ್ನ 11 ವರ್ಷಗಳ ಕಾಲ ಕ್ರೋಲಿಕ್​ ಇದೇ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...