
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ಮದ್ಯ ಹಾಗೂ ಮಾಂಸದ ಜೊತೆ ಊಟಕ್ಕೆ ಕುಳಿತ ಫೋಟೋ ಅದಾಗಿತ್ತು.
ಆದರೆ ಈ ಫೋಟೋ ಫೇಕ್ ಎಂಬುದನ್ನು ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಂ ಕಂಡುಹಿಡಿದಿದೆ.
ಪಡಿತರ ಚೀಟಿದಾರರ ಮನೆ ಬಾಗಿಲಿಗೆ ರೇಷನ್ ವಿತರಣೆ ಯೋಜನೆ ಪ್ರಾರಂಭಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್
ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ಪ್ರಚಾರ ಕಾರ್ಯ ಆರಂಭಿಸಿದೆ. ಇದೇ ವೇಳೆ ದೆಹಲಿ ಮುಖ್ಯಮಂತ್ರಿಯವರ ಫೋಟೋ ವೈರಲ್ ಆಗಿದೆ. ಮೂರು ತಟ್ಟೆಗಳಲ್ಲಿ ಮಾಂಸದಂತೆ ಕಾಣುವ ಆಹಾರ ಜೊತೆಗೆ ಎರಡು ಲೋಟಗಳಲ್ಲಿ ಮದ್ಯ, ಒಂದು ಬಾಟಲ್ ಸಹ ಇರುವಂತೆ ಫೋಟೋದಲ್ಲಿ ಕಾಣಿಸುತ್ತದೆ.
ಕೇಜ್ರಿವಾಲ್ ತಿನ್ನುತ್ತಿರುವುದು ಕಾಣಿಸಿದರೆ, ಮಾನ್ ಅವರು ಗ್ಲಾಸ್ ಹಿಡಿದುಕೊಂಡು ಮೂರನೇ ವ್ಯಕ್ತಿಯನ್ನು ನೋಡುತ್ತಿದ್ದಾರೆ. ಈ ಫೋಟೋವು ಮಫ್ಲರ್ ಗ್ಯಾಂಗ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿದೆ.
ಕಳೆದ ವರ್ಷದ ನವೆಂಬರ್ ನಲ್ಲಿ ಆಂಗ್ಲ ಪತ್ರಿಕೆಯಲ್ಲಿ ಫೋಟೋ ಪ್ರಕಟವಾಗಿದ್ದು, ಹಳ್ಳಿಯ ಮನೆಯಲ್ಲಿ ಈ ಇಬ್ಬರು ನಾಯಕರು ಊಟ ಮಾಡಿದ್ದರು. ಆ ಫೋಟೋದಲ್ಲಿ ಮಾಂಸವಾಗಲಿ, ಮದ್ಯ ಇರಲಿಲ್ಲ. ಆ ಫೋಟೋವನ್ನು ಮಾರ್ಫ್ ಮಾಡಿ ಹರಿಯಬಿಡಲಾಗಿದೆ.