ಅನೇಕ ದೇಶಗಳು ಕೋವಿಡ್ ಲಸಿಕೆಯನ್ನು ತಂತಮ್ಮ ಜನತೆಗೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಕೋವಿಡ್ ಮೂರನೇ ಅಲೆ ಮತ್ತು ವೈರಾಣುವಿನ ಇತರೆ ಅವತರಣಿಕೆಗಳು ಮುಂಬರುವ ದಿನಗಳಲ್ಲಿ ಬಂದರೆ ಎದುರಿಸಲು ಬೂಸ್ಟರ್ ಡೋಸ್ ಅಭಿವೃದ್ಧಿಪಡಿಸುವ ಕೆಲಸ ಭರದಿಂದ ಸಾಗಿದೆ.
ಇಸ್ರೇಲ್, ಜರ್ಮನಿ, ಫ್ರಾನ್ಸ್ ಹಾಗೂ ಬ್ರಿಟನ್‌ಗಳಲ್ಲಿ ಬೂಸ್ಟರ್ ಡೋಸ್‌ಗಳನ್ನು ಸಾರ್ವಜನಿಕರಿಗೆ ಒದಗಿಸಲು ಆರಂಭಿಸಲಾಗಿದೆ.
ಆದರೆ ಈ ವಿಚಾರದಲ್ಲಿ ಬಹಳ ಹಿಂದೆ ಉಳಿದಿರುವ ಭಾರತದಲ್ಲಿ ಜನಸಂಖ್ಯೆಯ 8%ರಷ್ಟು ಮಂದಿಗೆ ಮಾತ್ರವೇ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ದತ್ತಾಂಶದಿಂದ ತಿಳಿದುಬಂದಿದೆ.
PF ಬಡ್ಡಿ ದರದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಇಪಿಎಫ್ಒ
ಕೋವಿಡ್ ಲಸಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದವರಿಗೂ ಬೂಸ್ಟರ್ ಡೋಸ್ ನೀಡಬೇಕೆಂದು ಸೂಚಿಸಲು ಅಗತ್ಯವಾದ ದತ್ತಾಂಶ ಇನ್ನೂ ಕಲೆಹಾಕಿಲ್ಲ ಎಂದು ಐಸಿಎಂಆರ್ ಸದಸ್ಯ ಹಾಗೂ ಕೋವಿಡ್ ಲಸಿಕೆಯ ರಾಷ್ಟ್ರಮಟ್ಟದ ತಜ್ಞರ ಸಮಿತಿಯ ಸದಸ್ಯರೂ ಆದ ಸಮಿರಾನ್ ಪಾಂಡಾ ತಿಳಿಸಿದ್ದಾರೆ.
ಆದರೆ ಕೋವಿಡ್ ಲಸಿಕೆಗಳನ್ನು ಹಾಕುವ ವಿಚಾರದಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಾಕಷ್ಟು ವ್ಯತ್ಯಾಸವಿದ್ದು. ಮೊದಲು ಇದನ್ನು ಸರಿಪಡಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಅಧನೋಂ ಗೆಬ್ರೆಯೆಸುಸ್ ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 100/100 ದರದಲ್ಲಿ ಮಂದಿಗೆ ಕೋವಿಡ್ ಲಸಿಕೆ ಕೊಟ್ಟರೆ ಕಡಿಮೆ ಆದಾಯ ಇರುವ ದೇಶಗಳಲ್ಲಿ 1.5/100ರ ದರದಲ್ಲಿ ಮಾತ್ರವೇ ಲಸಿಕೆ ಹಾಕಲಾಗುತ್ತಿದೆ.