alex Certify 30 ಮಿಲಿಯನ್​ ಪೋಸ್ಟ್ ಹಿಂಪಡೆದ ಫೇಸ್‌ ಬುಕ್:‌ ಐಟಿ ಇಲಾಖೆ ಮಾರ್ಗಸೂಚಿ ಅನ್ವಯ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ಮಿಲಿಯನ್​ ಪೋಸ್ಟ್ ಹಿಂಪಡೆದ ಫೇಸ್‌ ಬುಕ್:‌ ಐಟಿ ಇಲಾಖೆ ಮಾರ್ಗಸೂಚಿ ಅನ್ವಯ ಕ್ರಮ

ಮೇ 15 ರಿಂದ ಜೂನ್​ 15ರ ಅವಧಿಯಲ್ಲಿ ಫೇಸ್​ಬುಕ್​​ ಕಾನೂನು ಉಲ್ಲಂಘನೆಯ 10 ವಿಭಾಗಗಳ ಅಡಿಯಲ್ಲಿ ದೇಶದಲ್ಲಿ ಸುಮಾರು 30 ಮಿಲಿಯನ್​ಗೂ ಅಧಿಕ ಕಂಟೆಟ್​ ಪೀಸ್​ಗಳ ವಿರುದ್ಧ ಕ್ರಮ ಕೈಗೊಂಡಿದೆ.

ಐಟಿ ಇಲಾಖೆ ಮಾರ್ಗಸೂಚಿಗಳ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್​ಬುಕ್​ ಮಾಸಿಕ ಸಭೆಯಲ್ಲಿ ಮಾಹಿತಿ ನೀಡಿದೆ. ಇದೇ ಅವಧಿಯಲ್ಲಿ ಇನ್​ಸ್ಟಾಗ್ರಾಂ ಕೂಡ ಕಾನೂನು ಉಲ್ಲಂಘನೆಯ 9 ವಿಭಾಗಗಳ ಅಡಿಯಲ್ಲಿ 2 ಮಿಲಿಯನ್​ ಪೋಸ್ಟ್​ಗಳನ್ನ ಅಳಿಸಿ ಹಾಕಿದೆ.

ಐಟಿ ಸಚಿವಾಲಯ ಹೊಸ ಮಾರ್ಗಸೂಚಿಯ ಅನುಸಾರ, 5 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿರುವ ದೊಡ್ಡ ಡಿಜಿಟಲ್​ ವೇದಿಕೆಗಳು ಪ್ರತಿ ತಿಂಗಳು ಆವರ್ತಕ ವರದಿಯನ್ನ ಸಲ್ಲಿಸೋದು ಕಡ್ಡಾಯವಾಗಿದೆ. ಈ ವರದಿಯಲ್ಲಿ ಕಳೆದೊಂದು ತಿಂಗಳಲ್ಲಿ ಸ್ವೀಕರಿಸಲಾದ ದೂರು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಬೇಕು.

ಈ ಆವರ್ತಕ ವರದಿಯ ಪ್ರಕಾರ ಫೇಸ್​ಬುಕ್​ ಮೇ 15 ರಿಂದ ಜೂನ್​ 15ರ ಅವಧಿಯಲ್ಲಿ 30 ಮಿಲಿಯನ್​ ಕಟೆಂಟ್​ ಪೀಸ್​ಗಳ ವಿರುದ್ಧ ಕ್ರಮ ಕೈಗೊಂಡಿದೆ. ಅದೇ ರೀತಿ ಇನ್​ಸ್ಟಾಗ್ರಾಂ 2 ಮಿಲಿಯನ್​​ ಕಟೆಂಟ್​ ಪೀಸ್ ಗ​​ಳ ವಿರುದ್ಧ ಕ್ರಮ ತೆಗೆದುಕೊಂಡಿದೆ.

ಮುಂದಿನ ಮಾಸಿಕ ಆವರ್ತಕ ವರದಿಯಲ್ಲಿ ಜುಲೈ 15ರಂದು ಪ್ರಕಟಿಸೋದಾಗಿ ಫೇಸ್​ಬುಕ್​​ ಹೇಳಿದೆ. ಮುಂದಿನ ವರದಿಗಳಲ್ಲಿ ಇನ್ನಷ್ಟು ಪಾರದರ್ಶಕತೆಯನ್ನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...