ಕೋವಿಡ್ ಸೋಂಕಿನ ಡೆಲ್ಟಾ ಅವತರಣಿಕೆ ಎಲ್ಲೆಡೆ ಭೀತಿ ಮೂಡಿಸುತ್ತಿರುವ ಕಾರಣ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಅಮೆರಿಕದಲ್ಲಿರುವ ತನ್ನ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಜನವರಿ 2022ರವರೆಗೆ ವಿಸ್ತರಿಸಿದೆ.
“ಕೋವಿಡ್ ಡೆಲ್ಟಾ ಸೋಂಕಿನ ಬಾಧೆ ಅಮೆರಿಕದ ಹೊರಗಿನ ದೇಶಗಳಲ್ಲೂ ಇದೆ ಅನಿಸುತ್ತಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಕಚೇರಿಗೆ ಮರಳುವ ನಮ್ಮ ಯೋಜನೆಯು ಪ್ರತಿಯೊಬ್ಬರ ಸುರಕ್ಷತೆಯ ಮೇಲೆ ನಿಂತಿದೆ ಎಂದು ಖಾತ್ರಿಪಡಿಸುತ್ತೇವೆ,” ಎಂದು ಫೇಸ್ಬುಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್ ಖಾನ್
ಕಡ್ಡಾಯವಾಗಿ ಲಸಿಕೆ ಹಾಗೂ ಮಾಸ್ಕ್‌ಗಳಂಥ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಅಕ್ಟೋಬರ್‌ನಿಂದ ತನ್ನ ಉದ್ಯೋಗಿಗಳು ಮರಳಿ ಕಚೇರಿಗೆ ಬರಲು ಫೇಸ್ಬುಕ್ ಪ್ಲಾನ್ ಮಾಡುತ್ತಿತ್ತು. ಆದರೆ ಸೋಂಕಿನ ನಿಯಂತ್ರಣ ತಡವಾಗುತ್ತಿರುವ ಕಾರಣ ಮುಂದಿನ ವರ್ಷದ ಆರಂಭದವರೆಗೂ ಮನೆಯಿಂದ ಕೆಲಸ ಮಾಡುವುದನ್ನು ಮುಂದುವರೆಸಲು ಫೇಸ್ಬುಕ್ ನಿರ್ಧರಿಸಿದೆ.
ಇದೇ ಕ್ರಮವನ್ನು ಗೂಗಲ್ ಮತ್ತು ಅಮೇಜ಼ಾನ್ ಸಹ ತೆಗೆದುಕೊಂಡಿವೆ.