alex Certify ನಿಮ್ಮ ʼಫೇಸ್ ​ಬುಕ್ʼ​ ಖಾತೆ ಹ್ಯಾಕ್​ ಆಗಿದೆಯೇ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ʼಫೇಸ್ ​ಬುಕ್ʼ​ ಖಾತೆ ಹ್ಯಾಕ್​ ಆಗಿದೆಯೇ ಎಂದು ತಿಳಿದುಕೊಳ್ಳಲು ಇಲ್ಲಿದೆ ಸುಲಭ ವಿಧಾನ

ಫೇಸ್ ​ಬುಕ್​ ಡೇಟಾ ಮೂಲಕ ಇತ್ತೀಚೆಗೆ 533 ಮಿಲಿಯನ್​ ಫೇಸ್ ​​ಬುಕ್​ ಬಳಕೆದಾರರ ಮಾಹಿತಿಯನ್ನು ಸೈಬರ್ ಕಳ್ಳರು ಹ್ಯಾಕ್​ ಮಾಡಿದ್ದಾರೆ. ಫೇಸ್​ಬುಕ್​ ಖಾತೆಯ ಮೂಲಕ ಹ್ಯಾಕರ್ಸ್​ ಇಮೇಲ್​, ಫೋನ್​ ನಂಬರ್​, ಸ್ಥಳ ಹೀಗೆ ಸಾಕಷ್ಟು ಮಾಹಿತಿಗಳನ್ನ ಕದಿಯುತ್ತಿದ್ದಾರೆ. ಹ್ಯಾಕರ್ಸ್​ ಕಾಟಕ್ಕೆ ಗುರಿಯಾದ 533 ಮಿಲಿಯನ್​ ಫೇಸ್​ ಬುಕ್​ ಬಳಕೆದಾರರಲ್ಲಿ 6 ಮಿಲಿಯನ್ ಮಂದಿ ಭಾರತೀಯರೇ ಆಗಿದ್ದಾರೆ.

ಮಾಹಿತಿ ಸೋರಿಕೆಯಿಂದ ಏನೆಲ್ಲಾ ಅಪಾಯ ಕಾದಿದೆ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಯಾವ ರೀತಿಯಲ್ಲಿ ಹ್ಯಾಕರ್ಸ್ ಈ ಡೇಟಾಗಳನ್ನ ಬಳಕೆ ಮಾಡ್ತಾರೆ..? ಅನ್ನೋ ಪ್ರಶ್ನೆ ಕೂಡ ಮೂಡಬಹುದು.

ಆದರೆ ನಿಮ್ಮ ಈ ಎಲ್ಲಾ ಮಾಹಿತಿಯನ್ನು ಬಳಸಿಕೊಂಡು ಹ್ಯಾಕರ್ಸ್​ ನಿಮ್ಮ ಬ್ಯಾಂಕ್​ ಖಾತೆಗೆ ಕನ್ನ ಹಾಕುವ ಸಾಧ್ಯತೆ ಇರುತ್ತದೆ. ಇಲ್ಲವಾದಲ್ಲಿ ನಿಮ್ಮ ಮಾಹಿತಿ ಸೋರಿಕೆ ಮಾಡುವ ಬೆದರಿಕೆಯೊಡ್ಡಿ ಹಣ ಪೀಕುವ ಸಾಧ್ಯತೆ ಕೂಡ ಇರುತ್ತದೆ.

ಆದರೆ ಸೈಬರ್​ ಸೆಕ್ಯೂರಿಟಿ ತಜ್ಞರಾದ ಟ್ರಾಯ್​ ಹಂಟ್​ ಎಂಬವರು ಇದಕ್ಕೊಂದು ಪರಿಹಾರ ನೀಡಿದ್ದಾರೆ. ಇವರೇ ಅಭಿವೃದ್ಧಿಪಡಿಸಿರುವ ವೆಬ್​ಸೈಟ್​ ಮೂಲಕ ನೀವು ನಿಮ್ಮ ಫೇಸ್​ ಖಾತೆ ಹ್ಯಾಕ್​ ಆಗಿದೆಯೋ ಇಲ್ಲವೋ ಅನ್ನೋದನ್ನ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹ್ಯಾವ್​ ಐ ಬೀನ್​ ಪೌನಡ್​..?(Have I Been Pwned?) ವೆಬ್​ಸೈಟ್​ಗೆ ಹೋಗಿ

ಇಲ್ಲಿ ಕಾಣುವ ಇನ್ ​ಪುಟ್​ ಬಾಕ್ಸ್​​ನಲ್ಲಿ ನಿಮ್ಮ ಮೊಬೈಲ್​ ಸಂಖ್ಯೆಯನ್ನು ಅಂತಾರಾಷ್ಟ್ರೀಯ ವಿಧಾನದ ರೀತಿಯಲ್ಲಿ ಟೈಪ್ ಮಾಡಿ. ಅಂದರೆ +91 ನಂತರ ಮೊಬೈಲ್‌ ನಂಬರ್ ಟೈಪ್​ ಮಾಡಿ.

ಈಗ ನಿಮಗೆ Good news — no pwnage found‌ ! ಎಂದು ಕಂಡುಬಂದಲ್ಲಿ ನಿಮ್ಮ ಮೊಬೈಲ್​ ನಂಬರ್​ ಹ್ಯಾಕ್​ ಆಗಲ್ಲ ಎಂದರ್ಥ. ಆದರೆ oh no — pwned ! ಎಂದು ಪರದೆ ಮೇಲೆ ಮೆಸೇಜ್​ ಕಾಣಿಸಿದಲ್ಲಿ ನಿಮ್ಮ ಐಡಿ ಹ್ಯಾಕ್​ ಆಗಿದೆ ಎಂದರ್ಥ.

ಮೊದಲೆಲ್ಲ ಈ ವೆಬ್​ಸೈಟ್​ ನಲ್ಲಿ ಇ ಮೇಲ್​ ಅಡ್ರೆಸ್​ ಹಾಕುವ ಮೂಲಕ ಹ್ಯಾಕರ್​ ಕಾಟದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಆದರೆ ಈಗ ವೆಬ್​​ಸೈಟ್​ನಲ್ಲಿ ಕೆಲ ಸುಧಾರಣೆ ಮಾಡಲಾಗಿದ್ದು ಮೊಬೈಲ್​ ನಂಬರ್​ ನಮೂದಿಸುವ ಮೂಲಕವೇ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...