ಫೇಸ್ ಬುಕ್ ಡೇಟಾ ಮೂಲಕ ಇತ್ತೀಚೆಗೆ 533 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ. ಫೇಸ್ಬುಕ್ ಖಾತೆಯ ಮೂಲಕ ಹ್ಯಾಕರ್ಸ್ ಇಮೇಲ್, ಫೋನ್ ನಂಬರ್, ಸ್ಥಳ ಹೀಗೆ ಸಾಕಷ್ಟು ಮಾಹಿತಿಗಳನ್ನ ಕದಿಯುತ್ತಿದ್ದಾರೆ. ಹ್ಯಾಕರ್ಸ್ ಕಾಟಕ್ಕೆ ಗುರಿಯಾದ 533 ಮಿಲಿಯನ್ ಫೇಸ್ ಬುಕ್ ಬಳಕೆದಾರರಲ್ಲಿ 6 ಮಿಲಿಯನ್ ಮಂದಿ ಭಾರತೀಯರೇ ಆಗಿದ್ದಾರೆ.
ಮಾಹಿತಿ ಸೋರಿಕೆಯಿಂದ ಏನೆಲ್ಲಾ ಅಪಾಯ ಕಾದಿದೆ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಯಾವ ರೀತಿಯಲ್ಲಿ ಹ್ಯಾಕರ್ಸ್ ಈ ಡೇಟಾಗಳನ್ನ ಬಳಕೆ ಮಾಡ್ತಾರೆ..? ಅನ್ನೋ ಪ್ರಶ್ನೆ ಕೂಡ ಮೂಡಬಹುದು.
ಆದರೆ ನಿಮ್ಮ ಈ ಎಲ್ಲಾ ಮಾಹಿತಿಯನ್ನು ಬಳಸಿಕೊಂಡು ಹ್ಯಾಕರ್ಸ್ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆ ಇರುತ್ತದೆ. ಇಲ್ಲವಾದಲ್ಲಿ ನಿಮ್ಮ ಮಾಹಿತಿ ಸೋರಿಕೆ ಮಾಡುವ ಬೆದರಿಕೆಯೊಡ್ಡಿ ಹಣ ಪೀಕುವ ಸಾಧ್ಯತೆ ಕೂಡ ಇರುತ್ತದೆ.
ಆದರೆ ಸೈಬರ್ ಸೆಕ್ಯೂರಿಟಿ ತಜ್ಞರಾದ ಟ್ರಾಯ್ ಹಂಟ್ ಎಂಬವರು ಇದಕ್ಕೊಂದು ಪರಿಹಾರ ನೀಡಿದ್ದಾರೆ. ಇವರೇ ಅಭಿವೃದ್ಧಿಪಡಿಸಿರುವ ವೆಬ್ಸೈಟ್ ಮೂಲಕ ನೀವು ನಿಮ್ಮ ಫೇಸ್ ಖಾತೆ ಹ್ಯಾಕ್ ಆಗಿದೆಯೋ ಇಲ್ಲವೋ ಅನ್ನೋದನ್ನ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಹ್ಯಾವ್ ಐ ಬೀನ್ ಪೌನಡ್..?(Have I Been Pwned?) ವೆಬ್ಸೈಟ್ಗೆ ಹೋಗಿ
ಇಲ್ಲಿ ಕಾಣುವ ಇನ್ ಪುಟ್ ಬಾಕ್ಸ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಂತಾರಾಷ್ಟ್ರೀಯ ವಿಧಾನದ ರೀತಿಯಲ್ಲಿ ಟೈಪ್ ಮಾಡಿ. ಅಂದರೆ +91 ನಂತರ ಮೊಬೈಲ್ ನಂಬರ್ ಟೈಪ್ ಮಾಡಿ.
ಈಗ ನಿಮಗೆ Good news — no pwnage found ! ಎಂದು ಕಂಡುಬಂದಲ್ಲಿ ನಿಮ್ಮ ಮೊಬೈಲ್ ನಂಬರ್ ಹ್ಯಾಕ್ ಆಗಲ್ಲ ಎಂದರ್ಥ. ಆದರೆ oh no — pwned ! ಎಂದು ಪರದೆ ಮೇಲೆ ಮೆಸೇಜ್ ಕಾಣಿಸಿದಲ್ಲಿ ನಿಮ್ಮ ಐಡಿ ಹ್ಯಾಕ್ ಆಗಿದೆ ಎಂದರ್ಥ.
ಮೊದಲೆಲ್ಲ ಈ ವೆಬ್ಸೈಟ್ ನಲ್ಲಿ ಇ ಮೇಲ್ ಅಡ್ರೆಸ್ ಹಾಕುವ ಮೂಲಕ ಹ್ಯಾಕರ್ ಕಾಟದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತು. ಆದರೆ ಈಗ ವೆಬ್ಸೈಟ್ನಲ್ಲಿ ಕೆಲ ಸುಧಾರಣೆ ಮಾಡಲಾಗಿದ್ದು ಮೊಬೈಲ್ ನಂಬರ್ ನಮೂದಿಸುವ ಮೂಲಕವೇ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.