ಸೌಂದರ್ಯ ಪ್ರತಿಫಲಿಸುವುದು ಮುಖದಿಂದಲೇ ತಾನೇ. ನಿಮ್ಮದು ಒಣ ತ್ವಚೆ ಅಥವಾ ಎಣ್ಣೆ ತ್ವಚೆಯಾಗಿರಲಿ, ಎಷ್ಟು ಬಾರಿ ನೀವು ಮುಖ ತೊಳೆಯುತ್ತೀರಿ ಎಂಬುದರ ಅಧಾರದ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅವಿತಿರುತ್ತದೆ ಎಂಬುದು ನಿಮಗೆ ಗೊತ್ತೇ ?
ಬೆಳಿಗ್ಗೆ ಹಾಸಿಗೆಯಿಂದ ಎದ್ದಾಕ್ಷಣ ಹಲ್ಲುಜ್ಜುವ ಮೊದಲು ಸ್ವಚ್ಛವಾದ ನೀರಿನಿಂದ ಮುಖ ತೊಳೆಯುವುದರಿಂದ ಸಾಕಷ್ಟು ತಾಜಾತನ ನಿಮ್ಮನ್ನು ಆವರಿಸುತ್ತದೆ. ಮುಖದ ಮೇಲಿರುವ ಸಣ್ಣ ಸಣ್ಣ ರಂಧ್ರಗಳ ಧೂಳು ಮತ್ತು ಕೊಳಕಿನ ಅಂಶ ಅದಾಗಿಯೇ ನಿವಾರಣೆ ಅಗುತ್ತದೆ.
BIG NEWS: ಪರಿಷತ್ ಚುನಾವಣೆ; ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ
ಚರ್ಮಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯಿದ್ದರೆ ಚರ್ಮ ರೋಗ ತಜ್ಞರನ್ನೇ ಭೇಟಿಯಾಗಿ ಸೂಕ್ತ ಸಾಬೂನು ಆಯ್ದುಕೊಳ್ಳಿ. ಮಧ್ಯಾಹ್ನ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದ ಮುಖದ ಮೇಲಿನ ಎಣ್ಣೆಯ ಅಂಶ ಇಲ್ಲವಾಗುತ್ತದೆ.
ಕಾಲೇಜು ಇಲ್ಲವೇ ಉದ್ಯೋಗ ಮುಗಿಸಿ ಬಂದ ಬಳಿಕ ಸಂಜೆ ಕೇವಲ ಮುಖ ತೊಳೆಯುವ ಬದಲು ಸ್ನಾನ ಮಾಡಿ ಫ್ರೆಶ್ ಆಗಿ ಬರುವುದೇ ಒಳ್ಳೆಯದು. ನೆನಪಿಡಿ ಮುಖ ತೊಳೆಯುವಾಗೆಲ್ಲ ಸ್ವಚ್ಛವಾದ ನೀರನ್ನೇ ಬಳಸಿ.