ಮುಖದ ಕಾಂತಿ ಹೆಚ್ಚಿಸಲು ಹಲವು ಬಗೆಯ ಫೇಸ್ ಪ್ಯಾಕ್ ನ್ನು ಹಚ್ಚುತ್ತೇವೆ. ಆದರೆ ಕೆಮಿಕಲ್ ಯುಕ್ತ ಫೇಸ್ ಪ್ಯಾಕ್ ಹಚ್ಚುವ ಬದಲು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ ಹಚ್ಚಿದರೆ ತುಂಬಾ ಉತ್ತಮ.
ಹಾಗಾಗಿ ಹಾಲು ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಹಾಲು ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ 10 ನಿಮಷ ಬಿಟ್ಟು ವಾಶ್ ಮಾಡಿ. ಇದರಿಂದ 3 ಬಗೆಯ ಪ್ರಯೋಜನವನ್ನು ಪಡೆಯಬಹುದು.
– ಹಾಲು ಮತ್ತು ಜೇನುತುಪ್ಪ ಸೇರಿ ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ನಿವಾರಿಸಿ ಮುಖದ ಕಳೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಹಾಲಿನಲ್ಲಿರುವ ವಿಟಮಿನ್ ಹೊಸ ಕೋಶಗಳ ರಚನೆಗೆ ಸಹಕಾರಿಯಾಗಿದೆ. ಇದರಿಂದ ಚರ್ಮ ತಾರುಣ್ಯ ಹೆಚ್ಚಾಗುತ್ತದೆ.
-ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಇದು ಚರ್ಮದ ಮೇಲಿದ್ದ ಕಲೆಗಳನ್ನು, ಗಾಯಗಳನ್ನು ನಿವಾರಿಸಿ ಕಲೆರಹಿತ ಚರ್ಮವನ್ನು ನೀಡುತ್ತದೆ.
-ಹಾಲು ಮತ್ತು ಜೇನುತುಪ್ಪದಲ್ಲಿರುವ ಪೋಷಕಾಂಶಗಳು ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ಡ್ರೈ ಸ್ಕಿನ್ ಸಮಸ್ಯೆ ದೂರವಾಗಿ ಚರ್ಮದ ಹೊಳಪು ಹೆಚ್ಚಾಗುತ್ತದೆ.