alex Certify ʼಚಿನ್ನʼದ ಡಿಜಿಟಲ್ ಹೂಡಿಕೆ ಮೊದಲು ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿನ್ನʼದ ಡಿಜಿಟಲ್ ಹೂಡಿಕೆ ಮೊದಲು ನಿಮಗಿದು ತಿಳಿದಿರಲಿ

ಅನಾದಿ ಕಾಲದಿಂದಲೂ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತ ಬಂದಿದ್ದಾರೆ. ಭಾರತೀಯರಿಗೆ ಚಿನ್ನದ ಮೇಲೆ ಹೆಚ್ಚಿನ ಮೋಹವಿದೆ. ಹಳದಿ ಲೋಹವನ್ನು ಸಾಲ ಮತ್ತು ಇಕ್ವಿಟಿಗಿಂತ ಸುರಕ್ಷಿತ ಹೂಡಿಕೆ ಆಯ್ಕೆಯೆಂದು ಪರಿಗಣಿಸಲಾಗಿದೆ.

ಮೊದಲು ಭೌತಿಕ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತಿತ್ತು. ಆದರೆ ಈಗ ಡಿಜಿಟಲ್ ಚಿನ್ನದ ಹೂಡಿಕೆ ಹೆಚ್ಚಾಗಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸ್ಟಾಕ್ ಬ್ರೋಕರ್‌ಗಳ ಮೂಲಕ ಚಿನ್ನವನ್ನು ಹೂಡಿಕೆ ಮಾಡಲಾಗುತ್ತದೆ. ಡಿಜಿಟಲ್ ಚಿನ್ನದ ಹೂಡಿಕೆ ಮೊದಲು ಅದ್ರ ಬಗ್ಗೆ ಕೆಲವೊಂದು ಮಾಹಿತಿ ತಿಳಿದಿರಬೇಕು.

ಡಿಜಿಟಲ್ ಚಿನ್ನವನ್ನು, ಆನ್‌ಲೈನ್‌ನಲ್ಲಿ ಖರೀದಿಸಬೇಕು. ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯಿದ್ದಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಡಿಜಿಟಲ್ ರೂಪದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಖರೀದಿಗೆ ಮಿತಿಯಿಲ್ಲ. 100 ಕ್ಕಿಂತ ಕಡಿಮೆ ಬೆಲೆ ಚಿನ್ನವನ್ನೂ ಖರೀದಿಸಬಹುದು.

ಪೇಟಿಎಂ, ಗೂಗಲ್ ಪೇ, ಫೋನ್ ಪೇಯಂತಹ ಹಲವಾರು ಮೊಬೈಲ್ ಇ-ವ್ಯಾಲೆಟ್‌ಗಳಿಂದ ಡಿಜಿಟಲ್ ಚಿನ್ನದ ಹೂಡಿಕೆ ಮಾಡಬಹುದು. ಎಚ್ಡಿಎಫ್ಸಿ ಸೆಕ್ಯುರಿಟೀಸ್ ಮತ್ತು ಮೋತಿಲಾಲ್ ಓಸ್ವಾಲ್ ನಂತಹ ದಲ್ಲಾಳಿಗಳು ಕೂಡ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ.

ಭಾರತದಲ್ಲಿ ಮೂರು ಕಂಪನಿಗಳು ಡಿಜಿಟಲ್ ಚಿನ್ನವನ್ನು ನೀಡುತ್ತಿವೆ. ಆಗ್ಮಾಂಟ್ ಗೋಲ್ಡ್ ಲಿಮಿಟೆಡ್, ಎಮ್‌ಎಂಟಿಸಿ-ಪಿಎಎಂಪಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಲಿಮಿಟೆಡ್.

ಚಿನ್ನವನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸಬಹುದು. 100 ರೂಪಾಯಿಗೆ ನೀವು ಚಿನ್ನದ ಖರೀದಿ ಶುರು ಮಾಡಬಹುದು. ಇದು ಶುದ್ಧ ಚಿನ್ನವಾಗಿದ್ದು, ಆಭರಣ ತಯಾರಿಕೆ ವೆಚ್ಚ ನೀಡಬೇಕಾಗಿಲ್ಲ. ಇದರಿಂದ ಹಣ ಉಳಿತಾಯವಾಗುತ್ತದೆ.

ಚಿನ್ನದ ಹೂಡಿಕೆ ಮೊದಲು ಕಂಪನಿಯ ಪಾರದರ್ಶಕತೆ ಬಗ್ಗೆ ತಿಳಿದಿರಬೇಕು. ಹಾಗೆ ಬೆಲೆಗಳ ಬದಲಾವಣೆ ಬಗ್ಗೆಯೂ ತಿಳಿಯುತ್ತಿರಬೇಕು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...