alex Certify ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಪಟ್ಟಿ ಇಲ್ಲಿದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಪಟ್ಟಿ ಇಲ್ಲಿದೆ ನೋಡಿ

ರಾಜ್ಯದಲ್ಲಿರುವ ಲೋಕಾಯುಕ್ತ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ಶಾಸಕ ಹಾಗೂ ಎಂಎಲ್​ಸಿಗಳು ತಮ್ಮ ಆದಾಯ, ಆಸ್ತಿ ಸೇರಿದಂತೆ ಎಲ್ಲಾ ವಿವರಣೆಗಳನ್ನು ಜೂನ್​ 30ರ ಒಳಗಾಗಿ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಬೇಕು.

ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯಡಿಯಲ್ಲಿ ಶಾಕಿಂಗ್​ ವಿಚಾರವೊಂದು ಬಯಲಿಗೆ ಬಂದಿದೆ. ರಾಜ್ಯದಲ್ಲಿ ಬಹುತೇಕ ಎಂಎಲ್​ಎ ಹಾಗೂ ಎಂಎಲ್​ಸಿಗಳು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸೋದ್ರಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್​.ಎಂ. ವೆಂಕಟೇಶ್​ ಸಲ್ಲಿಸಿದ್ದ ಆರ್​ಟಿಐ ಅರ್ಜಿಯಡಿಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ. ಇದರ ಪ್ರಕಾರ ಒಟ್ಟು 224 ಶಾಸಕರಲ್ಲಿ 147 ಮಂದಿ ಹಾಗೂ 75 ಎಂಎಲ್​ಸಿಗಳಲ್ಲಿ 60 ಮಂದಿ ಜೂನ್​ 30ರ ಒಳಗಾಗಿ ಆಸ್ತಿ ವಿವರಣೆ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಿಲ್ಲ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಈ ರೀತಿ ಸರಿಯಾದ ಸಮಯಕ್ಕೆ ಲೋಕಾಯುಕ್ತಕ್ಕೆ ಆಸ್ತಿ ವಿವರಣೆ ನೀಡದೇ ಇರುವವರಲ್ಲಿ ಬೊಮ್ಮಾಯಿ ಸಂಪುಟದ ಸಚಿವರೂ ಹಾಗೂ ಕೆಲ ಮಾಜಿ ಸಚಿವರು ಸಹ ಇದ್ದಾರೆ ಎನ್ನಲಾಗಿದೆ.

ಈ ಪಟ್ಟಿಯಲ್ಲಿರುವ ಕೆಲ ಪ್ರಮುಖರ ಹೆಸರು ಇಲ್ಲಿದೆ ನೋಡಿ :

ಹಾಲಿ ಸಚಿವರು :

ಜೆಸಿ ಮಾಧುಸ್ವಾಮಿ, ಕಾನೂನು ಸಚಿವ
ಬಿ.ಸಿ ಪಾಟೀಲ್​, ಕೃಷಿ ಸಚಿವ

ಶ್ರೀರಾಮುಲು, ಸಾರಿಗೆ ಸಚಿವ

ಸುನೀಲ್​ ಕುಮಾರ್​, ಇಂಧನ ಸಚಿವ

ಮುನಿರತ್ನ, ತೋಟಗಾರಿಕಾ ಸಚಿವ

ಅಂಗಾರ ಎಸ್​, ಮೀನುಗಾರಿಕಾ ಸಚಿವ

ಮಾಜಿ ಸಚಿವರು:

ರಮೇಶ್​ ಜಾರಕಿಹೊಳಿ(ಬಿಜೆಪಿ)

ಹೆಚ್​. ನಾಗೇಶ್​(ಬಿಜೆಪಿ)

ಕೃಷ್ಣಭೈರೇಗೌಡ (ಕಾಂಗ್ರೆಸ್​)

ಕೆ.ಜೆ ಜಾರ್ಜ್​( ಕಾಂಗ್ರೆಸ್​)

ಹೆಚ್​.ಡಿ ರೇವಣ್ಣ( ಜೆಡಿಎಸ್​)

ಜೆಡಿಎಸ್​ ನಾಯಕರು

ಹೆಚ್​​ಡಿ ಕುಮಾರಸ್ವಾಮಿ, ಮಾಜಿ ಸಿಎಂ

ಅನಿತಾ ಕುಮಾರಸ್ವಾಮಿ, ಶಾಸಕಿ

ಹೆಚ್​,ಡಿ ರೇವಣ್ಣ

ಕಾಂಗ್ರೆಸ್​ ನಾಯಕರು :

ಡಿ.ಕೆ ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ

ದಿನೇಶ್​ ಗುಂಡೂರಾವ್​

ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಇಂತಹ ಪರಿಸ್ಥಿತಿಯಲ್ಲಿ ಲೋಕಾಯುಕ್ತವು ಜನಪ್ರತಿನಿಧಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುತ್ತದೆ. ಅವರು ಚುನಾಯಿತ ಪ್ರತಿನಿಧಿಗಳಿಗೆ ಈ ಮಾಹಿತಿಯನ್ನು ಸಲ್ಲಿಸುತ್ತಾರೆ. ಇದಾದ ಬಳಿಕ ಪತ್ರಿಕೆಗಳಲ್ಲಿ ಅವರ ಹೆಸರನ್ನು ಪ್ರಕಟಿಸಲಾಗುತ್ತದೆ. ಈ ಮೂಲಕ ಅವರು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಮಾಹಿತಿಯನ್ನು ಬಹಿರಂಗ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...