1983ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತದ ತಂಡದ ಪರಿಕ್ರಮವನ್ನು ಆಚರಿಸುತ್ತಿರುವ ’83’ ಚಿತ್ರದ ಪ್ರಚಾರ ಕಾರ್ಯ ಮುಖ್ಯವಾಹಿನಿ/ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ಸದ್ದು ಮಾಡುತ್ತಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನೇತೃತ್ವದಲ್ಲಿರುವ ಪ್ರಸಕ್ತ ತಂಡವು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್‌ರಿಂದ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವಗಳ ವಿಚಾರವಾಗಿ ಸ್ಪೂರ್ತಿ ಪಡೆಯುವಂತೆ ಕಪಿಲ್ ತಂಡದ ಸದಸ್ಯರು ಸೂಚಿಸಿದ್ದಾರೆ.
ಬಾಲಿವುಡ್ ನಟ ರಣವೀರ್ ಸಿಂಗ್ ಕಪಿಲ್ ಪಾತ್ರದಲ್ಲಿ ನಟಿಸಿರುವ ’83’ ಚಿತ್ರದ ಪ್ರಚಾರ ಸಮಾರಂಭವೊಂದರ ಸಂದರ್ಭದಲ್ಲಿ ಮಾತನಾಡಿದ 1983ರ ತಂಡದ ಸದಸ್ಯರಲ್ಲಿ ಒಬ್ಬರಾದ ಮಾಜಿ ನಾಯಕ ಸುನೀಲ್ ಗವಾಸ್ಕರ್, “ಕಪಿಲ್‌ರಂತೆ ಬ್ಯಾಟ್ ಮಾಡಿ, ಕಪಿಲ್‌ರಂತೆ ಫೀಲ್ಡಿಂಗ್ ಮಾಡಿ, ಕಪಿಲ್‌ರಂತೆ ನಾಯಕತ್ವ ಮಾಡಿದರೆ ಮುಂದಿನ ವರ್ಷದ ಟಿ20 ವಿಶ್ವಕಪ್ ಅನ್ನೂ ಗೆಲ್ಲಬಹುದು ಮತ್ತು 2023ರಲ್ಲಿ ಭಾರತದಲ್ಲೇ ಆಯೋಜನೆಗೊಳ್ಳಲಿರುವ 50 ಓವರ್‌ಗಳ ವಿಶ್ವಕಪ್ ಅನ್ನೂ ಜಯಿಸಬಹುದು,” ಎಂದು ತಿಳಿಸಿದ್ದಾರೆ.
ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ
ಇದೇ ವೇಳೆ, ಇಂದಿನ ದಿನಗಳಲ್ಲಿ ಕ್ರಿಕೆಟ್ ತಂಡದ ನಾಯಕರಿಗೆ ವಿಪರೀತ ಒತ್ತಡಗಳನ್ನು ಸಹಿಸಬೇಕಾದ ಸಂದರ್ಭ ಬಂದಿದೆಯೇ ಎಂಬ ಪ್ರಶ್ನೆಗೆ ಖುದ್ದು ಉತ್ತರಿಸಿದ ಕಪಿಲ್ ದೇವ್, “ಆ ದಿನಗಳಲ್ಲಿ ನಮ್ಮಲ್ಲಿ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ವಿವಾದಗಳು ಕ್ರೀಡಾಪಟುಗಳ ಜೀವನದ ಭಾಗವಾಗಿವೆ. ಆದರೆ ಕಥೆಗಳನ್ನು ಮಾಡುವ ಜನ ಬಹಳ ಮುಖ್ಯವಾಗುತ್ತಾರೆ. ನಾವು ನಮ್ಮ ಕಥೆಗಳನ್ನು ಬರೆದು ಮುಂದು ಸಾಗುತ್ತೇವೆ. ನನ್ನ ಪ್ರಕಾರ, ಟೀಕೆಗಳು ಇರಲಿ ಇಲ್ಲದಿರಲಿ, ಮುಂದೆ ಸಾಗುತ್ತಿರಬೇಕು ಎಂದು ನಾನು ನಂಬಿದ್ದೇನೆ. ಯಾರಿಗಾದರೂ ಏನಾದರೂ ಬರೆಯಬೇಕು ಎನಿಸಿದಲ್ಲಿ ಅವರು ಬರೆದುಕೊಳ್ಳಲಿ. ಟೀಕೆಗಳಿಗೆ ನಾವು ಭಯಪಡಬಾರದು ಮತ್ತು ಇದೇ ವೇಳೆ ಇನ್ನಷ್ಟು ಎತ್ತರದತ್ತ ಹೆಜ್ಜೆ ಇಡಲು ಬದ್ಧರಾಗಿರಬೇಕು,” ಎಂದು ತಿಳಿಸಿದ್ದಾರೆ.