alex Certify ಬಹುಕಾಲದ ಗೆಳತಿಯನ್ನು ವರಿಸಿದ 66 ವರ್ಷದ ಅರುಣ್ ಲಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಕಾಲದ ಗೆಳತಿಯನ್ನು ವರಿಸಿದ 66 ವರ್ಷದ ಅರುಣ್ ಲಾಲ್

ಭಾರತದ ಮಾಜಿ ಕ್ರಿಕೆಟ್ ಆಟಗಾರ ಅರುಣ್ ಲಾಲ್ ತಮ್ಮ ಸ್ನೇಹಿತೆ, ಶಿಕ್ಷಕಿ ಬುಲ್ ಬುಲ್ ಸಾಹ ಅವರನ್ನು ಕೊಲ್ಕತ್ತಾದಲ್ಲಿ ವಿವಾಹವಾಗಿದ್ದಾರೆ. ಕಳೆದ ತಿಂಗಳು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಕೆಲಕಾಲ ಪರಸ್ಪರ ಡೇಟಿಂಗ್ ನಲ್ಲಿ ತೊಡಗಿದ್ದರು.

ಇದೀಗ ಅರುಣ್ ಲಾಲ್ ತಮ್ಮ 66 ನೇ ವರ್ಷದಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದಾರೆ. ತಮ್ಮ ಮೊದಲ ಪತ್ನಿ ರೀನಾ ಅನಾರೋಗ್ಯದ ಹಿನ್ನೆಲೆಯಲ್ಲಿ ಆಕೆಯಿಂದ ದೂರವಾಗಿದ್ದರೂ ಅವರ ಆರೈಕೆಗಾಗಿ ಅವರ ಜೊತೆಯಲ್ಲೇ ಇರಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಮಿಡ್-ಡೇ ಪ್ರಕಾರ, ಅರುಣ್ ಲಾಲ್ ಅವರು ತಮ್ಮ ಮೊದಲ ಪತ್ನಿ ರೀನಾರ ಸಹಮತಿ ಪಡೆದೇ ಸಾಹ ಅವರನ್ನು ವಿವಾಹವಾಗಿದ್ದಾರೆ. ಸಾಹ ಅವರೊಂದಿಗೆ ತಮ್ಮ ಮೊದಲ ಪತ್ನಿಯ ಆರೈಕೆ ಮಾಡಲು ಅವರು ನಿರ್ಧರಿಸಿದ್ದಾರೆ.

ನಿವೃತ್ತಿ ಸಂದರ್ಭದಲ್ಲಿ ತಪ್ಪಾಗಿ ಪಾವತಿಸಿದ ಹೆಚ್ಚುವರಿ ಹಣವನ್ನು ವಾಪಾಸ್‌ ಪಡೆಯುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಅರುಣ್ ಲಾಲ್ ಅವರಿಗಿಂತ 28 ವರ್ಷ ಕಿರಿಯವರಾಗಿರುವ ಸಾಹ ಕೊಲ್ಕತ್ತಾದಲ್ಲಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೇ 2 ರಂದು ಇಬ್ಬರು ವಿವಾಹವಾಗಿದ್ದಾರೆ. ಈ ವಿವಾಹದ ಫೋಟೋಗಳನ್ನು ಸಾಹ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಒಂದು ಚಿತ್ರದಲ್ಲಿ ಸಾಹ ಮತ್ತು ಅವರ ಕುಟುಂಬ ಸದಸ್ಯರಿದ್ದರೆ, ಇನ್ನೊಂದು ಚಿತ್ರದಲ್ಲಿ ನವವಿವಾಹಿತರಿಬ್ಬರು ಕೇಕ್ ಕತ್ತರಿಸುತ್ತಿದ್ದಾರೆ ಮತ್ತು ಮತ್ತೊಂದು ಚಿತ್ರದಲ್ಲಿ ಅರುಣ್ ಲಾಲ್ ಅವರು ಸಾಹ ಅವರಿಗೆ ಕೇಕ್ ತಿನ್ನಿಸುತ್ತಿರುವ ಸುಂದರ ದೃಶ್ಯವಿದೆ. ಇವರಿಬ್ಬರೂ ಪರಸ್ಪರ ವಿವಾಹ ಒಪ್ಪಂದದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ನವ ದಂಪತಿಗೆ ನೆಟ್ಟಿಗರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

May be an image of 1 person, jewellery and indoor
May be an image of 2 people, cake and flower
May be an image of 2 people, people standing and flower
May be an image of 4 people and people standing

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...