ವರ್ತಕರೊಬ್ಬರಿಂದ 45 ಲಕ್ಷ ರೂಪಾಯಿಗಳನ್ನು ದೋಚಿದ ಆರೋಪದ ಮೇಲೆ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕರಾದ ವ್ಯಕ್ತಿಯೊಬ್ಬರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 17ರಂದು, ಚೆನ್ನೈನ ಅಕ್ಕಿ ವ್ಯಾಪಾರಿ ಆನಂದಮ್ ಹೆಸರಿನ ವರ್ತಕರೊಬ್ಬರ ಮೇಲೆ ದಾಳಿ ಮಾಡಿದ 11 ಮಂದಿಯ ಗುಂಪು ಅವರಿಂದ 45 ಲಕ್ಷ ರೂಪಾಯಿ ದೋಚಿದೆ. ಈ ಗುಂಪಿನಲ್ಲಿ ಉತ್ತರ ಪ್ರದೇಶದ ಹಾಪುರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಗಜ್‌ರಾಜ್ ಸಿಂಗ್ ಪುತ್ರ ಸತ್ಯೇಂದ್ರ ಸಿಂಗ್ ಸಹ ಇದ್ದಾನೆ.
ಎಲ್ಲಾ ಕಳ್ಳರನ್ನೂ ಬಂಧಿಸಿರುವ ಪೊಲೀಸರು ಬಂಧಿಸಿದ್ದು 33.5 ಲಕ್ಷ ರೂಪಾಯಿಗಳನ್ನು ಮರಳಿ ಪಡೆಯಲಾಗಿದೆ. ಇದೇ ವೇಳೆ ದೇಶೀ ನಿರ್ಮಿತ ಮೂರು ಪಿಸ್ತೂಲ್‌ಗಳು, ಐದು ಸುತ್ತಿನ ಗುಂಡುಗಳು ಮತ್ತು ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸರು.
ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್ ಶಾಸಕ..! ಆಡಿಯೋ ವೈರಲ್
ಡರೋಡೆಕೋರರಲ್ಲಿ ಒಬ್ಬನಾದ ವಿನಜ್ ತೇಜಾ ಆನಂದಮ್‌ಗೆ ಕರೆ ಮಾಡಿ ಗುರುಗ್ರಾಮದಲ್ಲಿ ಅನೇಕ ಸ್ಕೀಂಗಳ ಮೇಲೆ ಹೂಡಿಕೆ ಮಾಡುವ ಅವಕಾಶಗಳಿರುವುದಾಗಿ ಹೇಳಿದ್ದಾನೆ. ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡುವ ಭರವಸೆಯನ್ನು ಕೊಟ್ಟಿರುವ ತೇಜನ ಮಾತು ನಂಬಿದ ಆನಂದಮ್, ಗುರುಗ್ರಾಮಕ್ಕೆ ಬಂದು ದೀಪಕ್ ಪಲ್ಟಾ ಜೊತೆಗೆ ಏಳು ಇತರ ಮಂದಿಯನ್ನು ಭೇಟಿಯಾಗಿದ್ದಾರೆ.
ಇದಾದ ಬಳಿಕ ಗಾಜ಼ಿಯಾಬಾದ್‌ನ ರಾಜ್ನಗರ್ ಡಿಸ್ಟ್ರಿಕ್ಟ್ ಸೆಂಟರ್‌ನಲ್ಲಿ ವಕೀಲ ಅತುಲ್ ತ್ಯಾಗಿ ಜೊತೆಗೆ ಹಣ ತೆಗೆದುಕೊಂಡು ಚರ್ಚೆ ಮಾಡಲು ಬಂದ ಆನಂದಮ್‌ಗೆ ಐವರು ಮಂದಿಯ ಗ್ಯಾಂಗ್ ಒಂದು ಹಲ್ಲೆ ಮಾಡಲು ಆರಂಭಿಸಿದೆ. ಪಿಸ್ತೂಲ್‌ನಿಂದ ಆನಂದಮ್ ಮೇಲೆ ಹಲ್ಲೆ ಮಾಡಿದ ದರೋಡೆಕೋರರು ಅವರಿಂದ 45 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ.