alex Certify BIG NEWS: 5 ಎಕರೆ ಜಮೀನು ಇದ್ದವರಿಗೆ EWS ಮೀಸಲಾತಿ ಇಲ್ಲ: ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 5 ಎಕರೆ ಜಮೀನು ಇದ್ದವರಿಗೆ EWS ಮೀಸಲಾತಿ ಇಲ್ಲ: ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಗೆ ಮಾಹಿತಿ

ನವದೆಹಲಿ: ಐದು ಎಕರೆ ಜಮೀನು ಹೊಂದಿದವರಿಗೆ ಮೇಲ್ವರ್ಗದ ಮೀಸಲು(EWS) ಇಲ್ಲವೆಂದು ಕೇಂದ್ರಸರ್ಕಾರ ಹೇಳಿದೆ. ಮೇಲ್ವರ್ಗದ ಮೀಸಲಾತಿಗೆ 8 ಲಕ್ಷ ರೂಪಾಯಿ ಆದಾಯದ ಮಿತಿ ಪರಿಗಣಿಸಲಾಗಿದೆ. ಈ ಕುರಿತಾಗಿ ತ್ರಿಸದಸ್ಯ ಸಮಿತಿ ಶಿಫಾರಸು ಮಾಡಿದ್ದು, ಅದನ್ನೇ ಒಪ್ಪಿಕೊಳ್ಳಲು ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಲಾಗಿದೆ.

ಐದು ಎಕರೆ ಜಮೀನು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಹೊಂದಿದವರು ಆದಾಯ ಎಷ್ಟೇ ಇದ್ದರೂ ಕೂಡ ಮೇಲ್ವರ್ಗದ ಮೀಸಲಾತಿಯಿಂದ ಹೊರಗಿಡಲಾಗುವುದು ಎಂದು ಹೇಳಲಾಗಿದೆ.

ಸುಪ್ರೀಂಕೋರ್ಟ್ ಇದನ್ನು ಅನುಮೋದಿಸಿದಲ್ಲಿ ಈ ವರ್ಷದ ಪಿಜಿ ನೀಟ್ ಹಾದಿ ಸುಗಮವಾಗಲಿದೆ. ಆರ್ಥಿಕವಾಗಿ ಹಿಂದುಳಿದವರು ಶೇಕಡ 10 ರಷ್ಟು ಮೀಸಲಾತಿ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಒಳಗಿರಬೇಕು ಎಂದು ಹೇಳಲಾಗಿದೆ.

ಆದರೆ, ಆದಾಯ ಎಷ್ಟೇ ಇದ್ದರೂ ಕೂಡ ಕೃಷಿ ಭೂಮಿ 5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಇಡಬ್ಲ್ಯುಎಸ್ ಕೋಟಾ ಅನ್ವಯಿಸುವುದಿಲ್ಲವೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...