ಪೊಲೀಸ್ ಅಧಿಕಾರಿಗಳು ಅಂದರೆ ಸಾಕು ಹೆದರುವವರೇ ಹೆಚ್ಚು. ತಮ್ಮ ಖಡಕ್ ವರ್ತನೆಯ ಮೂಲಕವೇ ಪೊಲೀಸರು ಸಾರ್ವಜನಿಕರಲ್ಲಿ ಒಂದು ಭಯವನ್ನು ಸೃಷ್ಟಿಸಿರ್ತಾರೆ.
ಆದರೆ ಪೊಲೀಸರ ಜನಸ್ನೇಹಿ ಆಡಳಿತ ಕೂಡ ಅವರ ಮೇಲೆ ಭಯವನ್ನು ಮಾತ್ರ ಹುಟ್ಟಿಸದೇ ಗೌರವವನ್ನೂ ಹೆಚ್ಚಿಸುತ್ತದೆ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಗುಜರಾತ್ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರಿಂದ ಭಾವನಾತ್ಮಕ ವಿದಾಯವನ್ನು ಸ್ವೀಕರಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಗುಜರಾತ್ ಪೊಲೀಸ್ ಅಧಿಕಾರಿಯ ಸೇವಾ ಮನೋಭಾವವನ್ನು ಜನರು ಎಷ್ಟು ಮೆಚ್ಚಿದ್ದಾರೆ ಎಂಬುದನ್ನು ತೋರಿಸುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಬ್ ಇನ್ಸ್ಪೆಕ್ಟರ್ಗೆ ಬೀಳ್ಕೋಡುವ ವೈರಲ್ ವಿಡಿಯೋವೊಂದನ್ನು ನೀವು ನೋಡಿದ್ದಿರಬಹುದು. ಈ ವಿಡಿಯೋದರಲ್ಲಿರುವ ಪೊಲೀಸ್ ಅಧಿಕಾರಿ ಹೆಸರು ವಿಶಾಲ್ ಪಟೇಲ್. ಇವರನ್ನು ಬೀಳ್ಕೊಡುವ ವೇಳೆಯಲ್ಲಿ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.
ಪೊಲೀಸ್ ಅಧಿಕಾರಿಯನ್ನು ಬೀಳ್ಕೊಡಲು ಸಾಕಷ್ಟು ಸಂಖ್ಯೆಯಲ್ಲಿ ನೆರೆದ ಜನರು ಪುಷ್ಪಮಳೆ ಹರಿಸಿದ್ರು. ಜನರ ಪ್ರೀತಿಗೆ ಕರಗಿದ ಪೊಲೀಸ್ ಅಧಿಕಾರಿ ಕೂಡ ಭಾವುಕರಾಗಿದ್ದನ್ನು ಕಾಣಬಹುದಾಗಿದೆ. ಅನೇಕರು ಪಟೇಲ್ರನ್ನು ಆಲಂಗಿಸಿದ್ರು. ಅನೇಕರು ವಿಶಾಲ್ ಪಟೇಲ್ ಆಶೀರ್ವಾದವನ್ನೂ ಪಡೆದಿದ್ದಾರೆ. ಇನ್ನೂ ಕೆಲವರು ಕಂಬನಿ ಮಿಡಿದಿದ್ದಾರೆ.