ರಸ್ತೆಯ ಮಧ್ಯದಲ್ಲಿ ಎರಡು ಲಿಜರ್ಡ್ (ಹಲ್ಲಿಗಳ ಜಾತಿಗೆ ಸೇರಿದ ಸರೀಸೃಪ) ಕುಸ್ತಿಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೊದಲ ನೋಟದಲ್ಲಿ ಅವರೆಡು ಒಂದನ್ನೊಂದು ತಬ್ಬಿಕೊಂಡಂತೆ ಕಾಣಿಸುತ್ತದೆ. ಆದರೆ, ಅವು ಪೈಪೋಟಿಗೆ ಬಿದ್ದಂತೆ ಗುದ್ದಾಡುವುದು ಕಾಣಿಸುತ್ತದೆ. ಇದು ನಡೆದಿದ್ದು ಥೈಲ್ಯಾಂಡ್ನಲ್ಲಿ, ಈ ಬೀದಿ ಜಗಳದ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ತಮ್ಮ ಜಗಳವನ್ನು ಅವು 30 ನಿಮಿಷಗಳ ಕಾಲ ರಸ್ತೆ ನಡುವೆ ಮುಂದುವರಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮೊದಲು ಅವೆರೆಡು ಗೆಳೆಯ – ಗೆಳತಿಯರು ಎಂದು ನಾನು ಭಾವಿಸಿದೆ. ಆದರೆ ನಂತರ ಅವರು ನಿಜವಾಗಿಯೂ ಜಗಳವಾಡುತ್ತಿದ್ದಾರೆಂದು ಯಾರೋ ಹೇಳಿದರು ಎಂದು ಪ್ರತ್ಯಕ್ಷದರ್ಶಿ ಚಾಲಕರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಥೈಲ್ಯಾಂಡ್ನಲ್ಲಿ ಇದು ಸಾಮಾನ್ಯ ದೃಶ್ಯವಾಗಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ.
“ನಾನು ವಿವರಣೆಯನ್ನು ಓದುವ ಮೊದಲೇ ಅದು ಥೆೈಲ್ಯಾಂಡ್ನದ್ದು ಎಂದು ತಿಳಿದಿತ್ತು. ನಾನು ಅಲ್ಲಿ ವಾಸಿಸುತ್ತಿದ್ದಾಗ ಇಂತವನ್ನು ನೋಡಿದ್ದೇನೆ ಎಂದು ಇನ್ನೊಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ.