alex Certify ’ಡಿಜಿಟಲ್ ಬರ್ತಡೇ ಕ್ಯಾಂಡಲ್‌’ ಆರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಡಿಜಿಟಲ್ ಬರ್ತಡೇ ಕ್ಯಾಂಡಲ್‌’ ಆರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲೆ

ಹುಟ್ಟುಹಬ್ಬಗಳ ಸಂದರ್ಭದಲ್ಲಿ ಕೇಕ್‌ಗಳ ಮೇಲೆ ಇಟ್ಟ ಮೇಣದ ಬತ್ತಿಯನ್ನು ಆರಿಸುವುದು ಸಾಮಾನ್ಯ. ಆದರೆ ಕೇಕ್ ಮೇಲೆ ಇಡಲು ಕ್ಯಾಂಡಲ್ ಇಲ್ಲವಾದಲ್ಲಿ ಏನು ಮಾಡುವುದು ?

ಹತ್ತಿರದ ಅಂಗಡಿಗೆ ಓಡಿ ಹೋಗಿ ಒಂದು ಕ್ಯಾಂಡಲ್ ತರುವುದು ಎಂಬ ಸಿದ್ಧ ಉತ್ತರ ಸಿಗುತ್ತದೆ ಅಲ್ಲವೇ ? ಆದರೆ ಸ್ನೇಹಿತರ ಗುಂಪೊಂದು ವಿಶಿಷ್ಟವಾದ ರೀತಿಯಲ್ಲಿ ಕ್ಯಾಂಡಲ್ ಆರಿಸುವ ಮೂಲಕ ತಮ್ಮ ಗೆಳತಿಯ ಹುಟ್ಟುಹಬ್ಬ ಆಚರಿಸಿದೆ.

ಡಿಜಿಟಲ್ ತಂತ್ರಜ್ಞಾನವನ್ನು ಹುಟ್ಟುಹಬ್ಬದ ಆಚರಣೆಗೂ ವಿಸ್ತರಿಸಿದ ಗೆಳೆಯರ ಈ ಗುಂಪು, ತಮ್ಮ ಸ್ನೇಹಿತೆಗೆ ’ಡಿಜಿಟಲ್ ಕ್ಯಾಂಡಲ್’ ಆರಿಸಿ ಕೇಕ್ ಕತ್ತರಿಸುವಂತೆ ಮಾಡಿದ್ದಾರೆ.

ಸ್ಮಾರ್ಟ್‌ಫೋನ್‌ಗಳ ಫ್ಲಾಶ್‌ಲೈಟ್‌ಗಳನ್ನೇ ಹುಟ್ಟುಹಬ್ಬದ ಕ್ಯಾಂಡಲ್‌ ಅನ್ನಾಗಿ ಇಲ್ಲಿ ಬಳಸಲಾಗಿದೆ. ಅಪ್ಲೋಡ್ ಆದ ಘಳಿಗೆಯಿಂದಲೂ ಈ ರೀಲ್‌ಗೆ 12.5 ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...