ಭಾರತ ಭಾನುವಾರ ಸುಮಾರು 392 ಮಂದಿಯನ್ನು ಕಾಬೂಲ್ನಿಂದ ವಿಮಾನದ ಮೂಲಕ ಕರೆತಂದಿದೆ.
ಭಾರತ ಹಾಗೂ ಅಫ್ಘನ್ ನಾಗರಿಕ ಸಿಖ್ ಹಾಗೂ ಹಿಂದೂಗಳನ್ನು ಕರೆತರಲಾಗಿದೆ. ಏರ್ ಇಂಡಿಯಾ ಹಾಗೂ ಇಂಡಿಗೋದ 2 ವಿಮಾನಗಳು ತಜಕಿಸ್ತಾನ ಹಾಗೂ ಕತಾರ್ನಿಂದ ಹಾರಾಟ ನಡೆಸಿವೆ. ಮುಂದಿನ ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.
ಭಾರತಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಇಂಜಿನಿಯರ್ಗಳ ಜೊತೆಗೆ ಇಕ್ನೂರ್ ಸಿಂಗ್ ಎಂಬ ಪುಟ್ಟ ಮಗುವನ್ನು ಕರೆತರಲಾಗಿದೆ. ಅಂದಹಾಗೆ ಇದು ಕಾಬೂಲ್ನಿಂದ ವಿಮಾನದ ಮೂಲಕ ಕರೆತರಲಾದ ಅತ್ಯಂತ ಕಿರಿಯ ಪ್ರಜೆಯಾಗಿದೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಡಾರ್ಜೆಲಿಂಗ್ನ ಹಲವಾರು ಕಾರ್ಮಿಕರನ್ನೂ ಸ್ಥಳಾಂತರಿಸಲಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇವರನ್ನು ತಾಯ್ನಾಡಿಗೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಹೇರಿದ್ದರು.