ನವದೆಹಲಿ: ಓಲಾ ಎಲೆಕ್ಟ್ರಿಕಲ್ ಎಸ್ 1 ಎಕ್ಸ್ ಸ್ಕೂಟರ್ ನ ವಿವಿಧ ರೀತಿಯ ಮಾಡೆಲ್ ಗಳ ಬೆಲೆಯನ್ನು 5ರಿಂದ 10 ಸಾವಿರ ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ.
ಓಲಾ ಎಲೆಕ್ಟ್ರಿಕ್ ಮಾರ್ಕೆಟಿಂಗ್ ಅಧಿಕಾರಿ ಅನ್ಶುಲ್ ಖಂಡೇಲ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕಂಪನಿ ಎಸ್ 1 ಎಕ್ಸ್ ಇ –ಸ್ಕೂಟರ್ ನ ವಿವಿಧ ಮಾಡೆಲ್ ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಮುಂದಿನ ವಾರದೊಳಗೆ ವಿತರಣೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಓಲಾ ಎಲೆಕ್ಟ್ರಿಕಲ್ ಎಸ್ 1 ಎಕ್ಸ್ ಮೂರು ಮಾಡೆಲ್ ಗಳ ದರ 79,999 ರೂಪಾಯಿಯಿಂದ 1,09,999 ರೂಪಾಯಿವರೆಗೆ ಇದೆ. 4 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್ 1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 99, 999 ರೂ.ಗೆ, 3 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್ 1 ಎಕ್ಸ್ ಇವಿ ಬೆಲೆ 84,999 ರೂ.ಗೆ, 2 ವ್ಯಾಟ್ ಬ್ಯಾಟರಿ ಹೊಂದಿರುವ ಎಸ್ 1 ಎಕ್ಸ್ ಇವಿ ಬೆಲೆ 69,999 ರೂಪಾಯಿಗೆ ಇಳಿಕೆ ಮಾಡಲಾಗಿದೆ.