alex Certify ನಿವೃತ್ತ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಆರೋಗ್ಯ ವಿಮೆ ಸೌಲಭ್ಯ ನೀಡಲು ESIC ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಆರೋಗ್ಯ ವಿಮೆ ಸೌಲಭ್ಯ ನೀಡಲು ESIC ಮಹತ್ವದ ನಿರ್ಧಾರ

ನವದೆಹಲಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮ(ESIC) ಶನಿವಾರದಂದು ವಿಶ್ರಾಂತಿ ಪಡೆದಿರುವ ವಿಮಾದಾರರಿಗೆ ವೈದ್ಯಕೀಯ ಪ್ರಯೋಜನಗಳನ್ನು ಸಡಿಲಿಸಲಾದ ನಿಯಮಗಳೊಂದಿಗೆ ವಿಸ್ತರಿಸಲು ನಿರ್ಧರಿಸಿದೆ.

ವೇತನ ಮಿತಿ ದಾಟಿದ ಕಾರಣದಿಂದ ಇಎಸ್ಐ ಯೋಜನೆ ವ್ಯಾಪ್ತಿಯಿಂದ ಹೊರಗುಳಿದ ನಿವೃತ್ತ ಉದ್ಯೋಗಿಗಳಿಗೂ ಇಎಸ್ಐಸಿ ವೈದ್ಯಕೀಯ ಸೌಲಭ್ಯ ನೀಡುವ ಪ್ರಸ್ತಾಪವನ್ನು ನೌಕರರ ರಾಜ್ಯ ವಿಮಾ ನಿಗಮ ಅನುಮೋದಿಸಿದೆ.

ಕೇಂದ್ರ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಇಎಸ್ಐಸಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 1, 2012ರ ನಂತರ ಕನಿಷ್ಠ 5 ವರ್ಷ ವಿಮೆ ಪಡೆಯಬಹುದಾದ ಕೆಲಸದಲ್ಲಿದ್ದ, ಏಪ್ರಿಲ್ 1, 2015 ರಂದು ಅಥವಾ ನಂತರದ ತಿಂಗಳಿಗೆ 30,000 ರೂ.ವರೆಗಿನ ವೇತನದೊಂದಿಗೆ ನಿವೃತ್ತರಾದ ಸ್ವಯಂ ನಿವೃತ್ತಿ ಪಡೆದ ವ್ಯಕ್ತಿಗಳು ಹೊಸ ಯೋಜನೆ ಅಡಿ ವೈದ್ಯಕೀಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇಎಸ್ಐ ಯೋಜನೆಯ ವಿಮಾದಾರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ವೈದ್ಯಕೀಯ ಸಲಹೆ, ಚಿಕಿತ್ಸೆ, ಔಷಧಿ, ಸಮಾಲೋಚನೆ, ಆಸ್ಪತ್ರೆಗೆ ದಾಖಲಾಗುವ ಶುಲ್ಕ ಭರಿಸುವ ರೂಪದಲ್ಲಿ ಸಂಪೂರ್ಣ ವೈದ್ಯಕೀಯ ಆರೈಕೆ ಒದಗಿಸುತ್ತದೆ.

ಇಎಸ್ಐ ಯೋಜನೆಯ 10 ಅಥವಾ ಅದಕ್ಕಿಂತ ಹೆಚ್ಚಿನ ಜನ ಕಾರ್ಯನಿರ್ವಹಿಸುವ ಕಾರ್ಖಾನೆ, ಹೋಟೆಲ್, ರೆಸ್ಟೋರೆಂಟ್, ಸಿನೆಮಾ ಮಂದಿರ, ಮಾಧ್ಯಮ ಸಂಸ್ಥೆ, ಅಂಗಡಿ, ಶೈಕ್ಷಣಿಕ, ವೈದ್ಯಕೀಯ ಸಂಸ್ಥೆ ಮೊದಲಾದ ಸಂಸ್ಥೆಗಳಿಗೆ ಅನ್ವಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...