ಆಧಾರ್ ಕಾರ್ಡ್‌ಗಳ ವಿವರಗಳೊಂದಿಗೆ ಅಕ್ಸೆಸ್ ಮಾಡಬಹುದಾದ ಇ-ಶ್ರಮ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದೆ. ಆಧಾರ್ ಸಂಖ್ಯೆ, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಬಳಸಿಕೊಂಡು ನೌಕರರು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಬಹುದು.
ಇ-ಶ್ರಮ್ ಪೋರ್ಟಲ್‌ನ ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ನೋಂದಣಿಯಾಗಲಿದ್ದಾರೆ. ಮೊದಲ ವರ್ಷದ ಪ್ರೀಮಿಯಂ ಅನ್ನು ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಭರಿಸಲಿದೆ.
ರೈತರಿಗೆ ಭರ್ಜರಿ ಖುಷಿ ಸುದ್ದಿ..! ಪ್ರತಿ ವರ್ಷ 6 ಸಾವಿರದ ಬದಲು ಸಿಗಲಿದೆ 36000 ರೂ.
ಈ ಪೋರ್ಟಲ್‌ನಲ್ಲಿ ದೇಶದ ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಎರಡು ಕೋಟಿಗೂ ಅಧಿಕ ಕಾರ್ಮಿಕರು ನೋಂದಾಯಿತರಾಗಿದ್ದಾರೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಪೋರ್ಟಲ್‌ನಲ್ಲಿ ನೋಂದಾಯಿತರಾಗಲು ಯಾವುದೇ ಶುಲ್ಕವನ್ನು ಕಾರ್ಮಿಕರು ಪಾವತಿ ಮಾಡಬೇಕಿಲ್ಲ.
eshram.gov.in ಲಿಂಕ್‌ಗೆ ಭೇಟಿ ನೀಡಿ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಬಹುದು. ಆದಾಯದ ಯಾವುದೇ ಗರಿಷ್ಠ ಮಿತಿ ಇಲ್ಲದೇ ಇರುವ ಕಾರಣ ಈ ಪೋರ್ಟಲ್‌ಗೆ ನೋಂದಾಯಿತರಾಗಲು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
ಅನ್ಯಗ್ರಹ ಜೀವಿಗಳ ವಾಹನವೆಂದು ಭಾವಿಸಿದ್ದ ಮಹಿಳೆಗೆ ಟಿವಿ ಹಾಕಿದಾಗ ಅರಿವಾಯ್ತು ಅಸಲಿ ಸತ್ಯ…!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಪ್ರಯೋಜನಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಬ್ಯಾಂಕ್ ಖಾತೆಯ ವಿವರಗಳನ್ನು ಪೋರ್ಟಲ್‌ಗೆ ನೋಂದಣಿಯಾಗುವ ವೇಳೆ ಒದಗಿಸಬೇಕು.