alex Certify ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ.

ಇದೀಗ ಪುಣೆ-ಮುಂಬೈ ನಡುವೆ ಸಂಚರಿಸುವ ಡೆಕ್ಕನ್ ಎಕ್ಸ್‌ಪ್ರೆಸ್‌ ರೈಲಿಗೆ ವಿಸ್ತಾ ಡೋಮ್ ಕೋಚ್‌ಗಳನ್ನು ಅಳವಡಿಸಲಾಗಿದೆ. ಭಾನುವಾರ ವಿಸ್ತಾ ಡೋಮ್‌ ಕೋಚ್‌ಗಳ ಮೊದಲ ಸಂಚಾರ ಆರಂಭಗೊಂಡಿದ್ದು, ಪ್ರಯಾಣದ ವಿಡಿಯೋಗಳು ಅನೇಕರನ್ನು ಚಕಿತಗೊಳಿಸಿವೆ.

ಕಾರು ಮಾಲೀಕರಿಗೆ ಮುಖ್ಯ ಮಾಹಿತಿ: ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಣೆ

“ಮುಂಬೈ-ಪುಣೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈಗ ಹಾದಿಯಲ್ಲಿ ಸಿಗುವ ನದಿ, ತೊರೆ, ಕಣಿವೆ, ಜಲಪಾತಗಳ ದೃಶ್ಯವನ್ನು ಯಾವುದೇ ಅಡೆತಡೆ ಇಲ್ಲದೇ ಕಣ್ತುಂಬಿಕೊಳ್ಳಬಹುದು” ಎಂದು ಕೇಂದ್ರ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ವಿಸ್ತಾ ಡೋಮ್ ಸಜ್ಜಿತ ರೈಲುಗಳು ಮುಂಬೈ-ಮಡಗಾಂವ್‌ ನಡುವೆ ಸಂಚರಿಸುತ್ತಿತ್ತು.

ಭಾರತೀಯ ರೈಲ್ವೇ ಉತ್ಪಾದಿಸುತ್ತಿರುವ ಈ ಕೋಚ್‌ಗಳು ಆರಾಮದಾಯಕ ಪ್ರಯಾಣದೊಂದಿಗೆ ಸುಂದರವಾದ ಪ್ರದೇಶಗಳಲ್ಲಿ ರೈಲು ಹಾದು ಹೋಗುವ ವೇಳೆ, ತಮ್ಮ ಪಾರದರ್ಶಕ ಮೇಲ್ಛಾವಣಿ ಹಾಗೂ ದೊಡ್ಡ ಕಿಟಕಿಗಳಿಂದಾಗಿ ಸುತ್ತಲಿನ ದೃಶ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...