ಟೀಂ ಇಂಡಿಯಾ ಭರವಸೆಯ ಸ್ಪಿನ್ನರ್ ಆರ್ ಅಶ್ವಿನ್ ಪಟೌಡಿ ಟ್ರೋಫಿಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ ಇದ್ದದ್ದು ಕಳೆದ ತಿಂಗಳು ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು.
ಪ್ರಸಕ್ತ ಸರಣಿಗೆ ಬಿಸಿಸಿಐ ಆಯ್ಕೆ ಮಾಡಿದ 20 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್ ಜೂನ್ನಲ್ಲಿ ಸೌತಾಂಪ್ಟನ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಇದು ಅಶ್ವಿನ್ ಸಂಪೂರ್ಣ 2 ತಿಂಗಳ ಪ್ರವಾಸದಲ್ಲಿ ಭಾಗವಹಿಸಿದ ಏಕೈಕ ಪಂದ್ಯವಾಗಿದೆ.
ವಿಶ್ವದ ನಂ. 2 ಟೆಸ್ಟ್ ಬೌಲರ್ ಆಗಿರುವ ಆರ್. ಅಶ್ವಿನ್ ತಂಡದಲ್ಲಿ ಇಷ್ಟೊಂದು ಸೈಡ್ಲೈನ್ ಆಗಿರೋದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಈ ನಡುವೆ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ಅಶ್ವಿನ್ ರೂಫ್ನಲ್ಲಿ ಒಬ್ಬರೇ ಕುಳಿತಿರುವ ಫೋಟವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಇದೊಂದು ಸಾಮಾನ್ಯ ಫೋಟೋ ಆಗಿದ್ದರೂ ಸಹ ಖಾಲಿ ಕುರ್ಚಿಗಳ ನಡುವೆ ಒಬ್ಬರೇ ಕುಳಿತಿರುವ ಅಶ್ವಿನ್ ಫೋಟೋಗೆ ಟ್ವಿಟರ್ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಸಿಗುತ್ತಿವೆ.
https://twitter.com/Ayushpandit265/status/1434516673197793288?ref_src=twsrc%5Etfw%7Ctwcamp%5Etweetembed%7Ctwterm%5E1434516673197793288%7Ctwgr%5E%7Ctwcon%5Es1_&ref_url=https%3A%2F%2Fwww.crictracker.com%2Feng-vs-ind-twitter-dejected-spotting-ravichandran-ashwin-sitting-all-alone-at-the-oval%2F