ದೇಶದಲ್ಲಿ ಲಸಿಕೆ ಅಭಿಯಾನ ಭರದಿಂದ ಸಾಗಿದ್ದು ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಸರಿ ಸುಮಾರು ಒಂದೂವರೆ ವರ್ಷಗಳಿಂದ ವರ್ಕ್ ಫ್ರಮ್ ಹೋಮ್ಗೆ ಸೂಚನೆ ನೀಡಿದ್ದ ಕಂಪನಿಗಳು ಇದೀಗ ತಮ್ಮ ಸಿಬ್ಬಂದಿಯನ್ನು ಪುನಃ ಕಚೇರಿಗೆ ಕರೆಸಿಕೊಳ್ಳಲು ಮನಸ್ಸು ಮಾಡಿವೆ ಎನ್ನಲಾಗಿದೆ.
ಭಾರತದ ಟಾಪ್ ಐಟಿ ಕಂಪನಿಗಳಲ್ಲಿ ಒಂದಾದ ಟಿಸಿಎಸ್ ತನ್ನ ಕಂಪನಿಯ ಅರ್ಧ ಮಿಲಿಯನ್ಗೂ ಅಧಿಕ ಸಿಬ್ಬಂದಿಗೆ 2021ರ ಅಂತ್ಯದೊಳಗಾಗಿ ಕಚೇರಿಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ ಎನ್ನಲಾಗಿದೆ.
ಟಿಸಿಎಸ್ ಕಂಪನಿಯ ಸಿಇಓ ಗೋಪಿನಾಥನ್ ಈ ವಿಚಾರವಾಗಿ ಮಾತನಾಡಿದ್ದು, ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈಗಾಗಲೇ ವರ್ಕ್ ಫ್ರಮ್ ಹೋಂನಲ್ಲಿರುವ ಸಿಬ್ಬಂದಿಯಲ್ಲಿ 70-80 ಪ್ರತಿಶತ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವಂತೆ ನಿರ್ದೇಶನ ನೀಡಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದ್ರು.
ಒಂದು ವೇಳೆ ಟಿಸಿಎಸ್ ತನ್ನ ಸಿಬ್ಬಂದಿಯನ್ನು ಪುನಃ ಕೆಲಸಕ್ಕೆ ಕರೆಯಿಸಿಕೊಂಡಲ್ಲಿ ಐಟಿ ಲೋಕದಲ್ಲಿ ಇದೊಂದು ಹೊಸ ಟ್ರೆಂಡ್ ಸೆಟ್ ಮಾಡುವ ಸಾಧ್ಯತೆ ಇದೆ. ಇದಾದ ಬಳಿಕ ಉಳಿದ ಕಂಪನಿಗಳೂ ಸಹ ಸಿಬ್ಬಂದಿಗೆ ಕಚೇರಿಗೆ ಹಾಜರಾಗಲು ಬುಲಾವ್ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.