ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಎಚ್.ಡಿ.ಎಫ್.ಸಿ. ತನ್ನ ಮೊದಲ ಮಹಿಳಾ ಶಾಖೆಯನ್ನುಕೇರಳದ ಕೋಝಿಕ್ಕೋಡ್ನಲ್ಲಿ ತೆರೆದಿದೆ.
ಜಿಲ್ಲೆಯ ವ್ಯಾಪಾರಿ ಕೇಂದ್ರವಾಗಿರುವ ಚೆರೂಟ್ಟಿ ರಸ್ತೆಯಲ್ಲಿರುವ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ. ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಬೀನಾ ಫಿಲಿಪ್ ಅವರು ಶಾಖೆಯನ್ನು ಉದ್ಘಾಟಿಸಿದರು.
ಮಾರ್ಚ್ 31, 2022 ರಂತೆ ಮಹಿಳೆ ಉದ್ಯೋಗಿಗಳು ಶೇಕಡಾ 21.7 ರಷ್ಟಿದ್ದಾರೆ ಮತ್ತು 2025ರ ವೇಳೆಗೆ ಇದನ್ನು ಶೇಕಡಾ 25 ಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ಬ್ಯಾಂಕ್ ಹೇಳಿಕೆ ತಿಳಿಸಿದೆ.
ದಕ್ಷಿಣ (ತಮಿಳುನಾಡು, ಪುದುಚೇರಿ ಮತ್ತು ಕೇರಳ) ಶಾಖೆಯ ಬ್ಯಾಂಕಿಂಗ್ ಹೆಡ್ ಸಂಜೀವ್ ಕುಮಾರ್, ಮಹಿಳೆಯರೇ ಕರ್ತವ್ಯ ನಿರ್ವಹಿಸುವ ಶಾಖೆಯನ್ನು ತೆರೆಯುವುದು ಬ್ಯಾಂಕಿನ ಲಿಂಗ ಮತ್ತು ವೈವಿಧ್ಯತೆಯ ಉಪಕ್ರಮಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನಗಳಿಗೆ ಮತ್ತೊಂದು ಉದಾಹರಣೆಯಾಗಿದೆ ಎಂದಿದ್ದಾರೆ.
ಕರ್ನಾಟಕ ಬ್ಯಾಂಕ್, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಬಹಳ ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಇಂತಹ ಪ್ರಯತ್ನ ಮಾಡಿ ಗಮನ ಸೆಳೆದಿವೆ.