alex Certify ʼಜೈಡಸ್ ಕ್ಯಾಡಿಲಾʼ ಲಸಿಕೆ ಅನುಮೋದನೆಗೆ ಕಾಯ್ಬೇಕು ಇನ್ನೊಂದಿಷ್ಟು ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜೈಡಸ್ ಕ್ಯಾಡಿಲಾʼ ಲಸಿಕೆ ಅನುಮೋದನೆಗೆ ಕಾಯ್ಬೇಕು ಇನ್ನೊಂದಿಷ್ಟು ದಿನ

ಕೊರೊನಾ ವೈರಸ್ ರೋಗದ ವಿರುದ್ಧ ಲಸಿಕೆ ಅತಿದೊಡ್ಡ ಅಸ್ತ್ರವೆಂದು ಪರಿಗಣಿಸಲಾಗುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಸಣ್ಣ ಮಕ್ಕಳಿಗೆ ಇನ್ನೂ ಕೊರೊನಾ ಲಸಿಕೆ ಬಂದಿಲ್ಲ. ಈ ಮಧ್ಯೆ ಜೈಡಸ್ ಕ್ಯಾಡಿಲಾ ಲಸಿಕೆ ಜೈಕೋವ್-ಡಿ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಇನ್ನೂ ಕೆಲವು ದಿನಗಳು ಬೇಕೆಂದು ಮೂಲಗಳು ಹೇಳಿವೆ.

ಜೈಡಸ್ ಕ್ಯಾಡಿಲಾ, ಕೊರೊನಾ ಲಸಿಕೆ ಜೈಕೋವ್-ಡಿ ಯ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಕೋರಿದೆ. ಈ ಲಸಿಕೆ 12 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಭ್ಯವಾಗಲಿದ್ದು, ಹಂತ -3 ಪ್ರಯೋಗಗಳು ಪೂರ್ಣಗೊಂಡಿವೆ. ಜೈಡಸ್ ಕ್ಯಾಡಿಲಾ ಸಲ್ಲಿಸಿದ ಅರ್ಜಿಯ ಪ್ರಾಥಮಿಕ ಮೌಲ್ಯಮಾಪನ ನಡೆಯುತ್ತಿದೆ. ಶೀಘ್ರದಲ್ಲೇ ಎಸ್‌ಇಸಿ ಸಭೆ ನಡೆಯಲಿದೆ. ಅಂಕಿಅಂಶಗಳು ತೃಪ್ತಿಕರವೆನಿಸಿದ್ರೆ ಜೈಕೋವ್-ಡಿ ಯ ತುರ್ತು ಬಳಕೆಗೆ ಈ ವಾರ ಅನುಮೋದನೆ ಸಿಗಲಿದೆ.

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಜೈಕೋವ್-ಡಿಗೆ ಅನುಮೋದನೆ ಸಿಕ್ಕಲ್ಲಿ ಅದು ದೇಶದ ಐದನೇ ಕೋವಿಡ್ -19 ಲಸಿಕೆಯಾಗಲಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಕೋವಾಕ್ಸಿನ್ ಮತ್ತು ಕೊವಿಶೀಲ್ಡ್ ಗೆ ಅನುಮೋದನೆ ನೀಡಿದೆ. ಇದರ ನಂತರ, ಸ್ಪುಟ್ನಿಕ್-ವಿ ಮತ್ತು ಮಾಡರ್ನಾದ ಕೊರೊನಾ ಲಸಿಕೆಯನ್ನು ಡಿಸಿಜಿಐ ಅನುಮೋದಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...