ದೇಶದ ಜೀವ ವೈವಿಧ್ಯ ನಕ್ಷೆಯಲ್ಲಿ ಕಂಡು ಬಂದ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಡದ ಚಿರತೆಗಳ ಗುಂಪೊಂದರ ಚಿತ್ರಗಳನ್ನು ಸಂಶೋಧಕರ ತಂಡವೊಂದು ಸೆರೆ ಹಿಡಿದಿದೆ. ನಾಗಾಲ್ಯಾಂಡ್‌ನಲ್ಲಿ ಹಿಮಾಲಯದ ಶ್ರೇಣಿಯ ನಡುವೆ 3,700 ಮೀಟರ್ ಎತ್ತರದಲ್ಲಿ ಈ ಚಿರತೆಗಳ ಸಮೂಹ ಕಂಡು ಬಂದಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಚಿರತೆಗಳು (ನೆಫೋಲಿಸ್ ನೆಬ್ಯೂಲೋಸಾ) ಕಂಡು ಬಂದಿವೆ. ಈ ಜಾತಿಯ ಜೀವಿಗಳು ಸಾಮಾನ್ಯವಾಗಿ ಕೆಳಮಟ್ಟದಲ್ಲಿರುವ ಮಳೆಕಾಡುಗಳಲ್ಲಿ ಕಂಡು ಬರುತ್ತವೆ.
LPG ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್
ಈ ಎತ್ತರದ ಪ್ರದೇಶದಲ್ಲಿ ಎರಡು ಚಿರತೆಗಳು ಮತ್ತು ಮರಿಗಳು ಓಡಾಡುತ್ತಿರುವುದನ್ನು ಸಂಶೋಧಕರು ರೆಕಾರ್ಡ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ಮೋಡದ ಚಿರತೆಗಳನ್ನು ದೊಡ್ಡ ಬೆಕ್ಕುಗಳ ಪೈಕಿ ಅತ್ಯಂತ ಸಣ್ಣದಾದ ಬೆಕ್ಕು ಎಂದು ಪರಿಗಣಿಸಿದೆ.