alex Certify ಕೊನೆಗೂ ಭಾರತೀಯ ಗೆಳೆಯನ ಭೇಟಿ ಮಾಡಿದ ಟೆಸ್ಲಾ ಸಿಇಒ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ಭಾರತೀಯ ಗೆಳೆಯನ ಭೇಟಿ ಮಾಡಿದ ಟೆಸ್ಲಾ ಸಿಇಒ

ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ಟೆಸ್ಲಾ ಸಿಇಒ ಎಲೋನ್​ ಮಸ್ಕ್​ ಅವರನ್ನು ಫಾಲೋ ಮಾಡುತ್ತಿದ್ದರೆ, ಅವರು ಭಾರತದ ಟ್ವಿಟರ್​ ಗೆಳೆಯನನ್ನು ಹೊಂದಿದ್ದಾರೆಂದು ಬಹುಶಃ ಗಮನಿಸಿರಬಹುದು.

ಆಗೊಮ್ಮೆ ಈಗೊಮ್ಮೆ ಪುಣೆ ಮೂಲದ ಟೆಕ್ಕಿ ಪ್ರಣಯ್​ ಪಾಥೋಲ್​ ಅವರ ಖಾತೆಯ ಟ್ಯಾಗ್​ ಅನ್ನು ಮಸ್ಕ್​ ಉಲ್ಲೇಖಿಸುತ್ತಾರೆ. ಇಬ್ಬರೂ ಸಾಕಷ್ಟು ಒಳ್ಳೆಯ ಸ್ನೇಹಿತರು ಎಂಬುದು ಚರ್ಚೆಯಲ್ಲಿರುವ ವಿಚಾರ.

ಈಗ, ಪ್ರಣಯ್​ ಪಾಥೋಲ್​ ಅವರು ಟೆಕ್ಸಾಸ್​ನಲ್ಲಿ ಮಸ್ಕ್​ ಅವರನ್ನು ಭೇಟಿ ಮಾಡಿದ್ದು, ಫೋಟೋ ಶೇರ್​ ಮಾಡಿದ್ದಾರೆ. ಇದು ದೇಸೀ ನೆಟ್ಟಿಗರಲ್ಲಿ ಮೆಚ್ಚುಗೆ ಹುಟ್ಟಿಸಿದೆ.

ಪ್ರಣರ್​ ಪಾಥೋಲ್​ ಅವರು ಗಿಗಾಫ್ಯಾಕ್ಟರಿ ಟೆಕ್ಸಾಸ್​ನಲ್ಲಿ ಕ್ಲಿಕ್​ ಮಾಡಿದ ಫೋಟೋವನ್ನು ಟ್ವೀಟ್​ ಮಾಡಿದ್ದಾರೆ. ತಾವು ತುಂಬಾ ಮೆಚ್ಚಿದ ವ್ಯಕ್ತಿಯನ್ನು ಭೇಟಿಯಾದ ಸಂತೋಷ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಗಿಗಾಫ್ಯಾಕ್ಟರಿ ಟೆಕ್ಸಾಸ್​ನಲ್ಲಿ ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಚೆನ್ನಾಗಿತ್ತು. ಅಂತಹ ವಿನಮ್ರ ವ್ಯಕ್ತಿಯನ್ನು ನೋಡಿಲ್ಲ. ನೀವು ಲಕ್ಷಾಂತರ ಜನರಿಗೆ ಸ್ಫೂತಿರ್ಯಾಗಿದ್ದೀರಿ ಎಂದು ಪಾಥೋಲ್​ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಪೋಸ್ಟ್​ಗೆ ಸಾವಿರಾರು ಲೈಕ್​ ಕಾಮೆಂಟ್​ ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...