
ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಮತ್ತು ಗ್ರಿಮ್ಸ್ ಮೂರು ವರ್ಷಗಳ ಡೇಟಿಂಗ್ ನಂತರ ಬೇರ್ಪಟ್ಟಿದ್ದಾರೆ ಎಂದು ವಿದೇಶಿ ಮಾಧ್ಯಮ ವರದಿ ಮಾಡಿದೆ.
2018 ರಲ್ಲಿ ಗ್ರಿಮ್ಸ್ ಜೊತೆ ಡೇಟಿಂಗ್ ಆರಂಭಿಸಿದ ಎಲಾನ್ ಮಸ್ಕ್ ಅವರು ಬೇರ್ಪಟ್ಟಿರುವುದಾಗಿ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ದೂರವಾದರೂ ಕೂಡ ಎಲಾನ್ ಮಸ್ಕ್ ಮತ್ತು ಗ್ರಿಮ್ಸ್ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಹಾಗೂ ತಮ್ಮ ಒಂದು ವರ್ಷದ ಪುತ್ರನನ್ನು ಸಹ-ಪೋಷಕರಾಗಿಯೇ ಬೆಳೆಸುವುದಾಗಿ ಹೇಳಿದ್ದಾರೆ.
“ನಾವು ಸ್ವಲ್ಪ ಅಷ್ಟೇ ಬೇರೆ-ಬೇರೆಯಾಗಿದ್ದೇವೆ. ಆದರೆ, ಈಗಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಆಗಾಗ ಒಬ್ಬರನ್ನೊಬ್ಬರು ನೋಡುತ್ತೇವೆ ಮತ್ತು ಇಬ್ಬರೂ ಉತ್ತಮ ಸಂಬಂಧದಲ್ಲಿದ್ದೇವೆ” ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಎಲಾನ್ ಮಸ್ಕ್ ಮತ್ತು ಗ್ರಿಮ್ಸ್ ಕೊನೆಯ ಬಾರಿಗೆ ಸೆಪ್ಟೆಂಬರ್‌ನಲ್ಲಿ ಮೆಟ್ ಗಾಲಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕಳೆದ ವಾರಾಂತ್ಯದಲ್ಲಿ, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಪತ್ನಿ ನಿಕೋಲ್ ಶಾನಹಾನ್ ಪಾರ್ಟಿಯನ್ನು ಆಯೋಜಿಸಿದ್ದರು. ಅದರಲ್ಲಿ ಎಲಾನ್ ಮಸ್ಕ್ ಒಬ್ಬರೇ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಏತನ್ಮಧ್ಯೆ, ಟ್ವಿಟ್ಟರ್ ತುಂಬೆಲ್ಲಾ ಎಲಾನ್ ಮಸ್ಕ್ ಮತ್ತು ಗ್ರಿಮ್ಸ್ ದೂರವಾದ ವಿಷಯವೇ ಸಖತ್ ಸದ್ದು ಮಾಡುತ್ತಿದೆ. ಬಳಕೆದಾರರು ಇವರಿಬ್ಬರು ದೂರವಾಗಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
https://twitter.com/marmitaz/status/1441671126212567041?ref_src=twsrc%5Etfw%7Ctwcamp%5Etweetembed%7Ctwterm%5E1441671126212567041%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Felon-musk-and-grimes-break-up-after-dating-for-3-years-twitter-reacts-1857124-2021-09-25