ಕಳೆದ ಐದು ತಿಂಗಳಿನಿಂದ ಮಲೆನಾಡು ಭಾಗದ ಜನರಿಗೆ ದುಃಸ್ವಪ್ನದಂತೆ ಕಾಡುತ್ತಿದ್ದ ನರಹಂತಕ ಆನೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಸಕಲೇಶಪುರ ತಾಲೂಕಿನ ಗೀತಾಂಜಲಿ ಎಸ್ಟೇಟ್ನಲ್ಲಿ ಆನೆಯನ್ನ ಸೆರೆಹಿಡಿಯಲಾಗಿದೆ.
ಪರಿಣಾಮಕಾರಿಯಾಗಿದೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ: 12 ಗಂಟೆಯಲ್ಲಿ ಗುಣಮುಖನಾದ ರೋಗಿ
ಡಿಸಿಎಫ್ ಬಸವರಾಜ್ ನೇತೃತ್ವದಲ್ಲಿ ನಡೆದ ಆಪರೇಷನ್ ಸಲಗದಲ್ಲಿ ಅಭಿಮನ್ಯು, ವಿಕ್ರಂ ಹಾಗೂ ಮಹಾರಾಷ್ಟ್ರ ಭೀಮ ಕೂಡ ಭಾಗಿಯಾಗಿದ್ದವು. ಇಂದು ಸೆರೆಯಾದ ಆನೆಯನ್ನ ಶೀಘ್ರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಿದ್ದಾರೆ.
ಕೊರೊನಾ ಓಡಿಸಿ ಅಂದ್ರೆ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ: ಹೆಚ್. ವಿಶ್ವನಾಥ್ ಗುಡುಗು
ಕಳೆದ ಐದು ತಿಂಗಳಿನಿಂದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಈಗಾಗಲೇ ಕಾಡಾನೆಗಳು ಐವರನ್ನ ಬಲಿ ಪಡೆದಿವೆ. ಹೀಗಾಗಿ ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ಪದೇ ಪದೇ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡುತ್ತಲೇ ಬಂದಿದ್ದರು. ಕಾರ್ಯಾಚರಣೆಯ ಮೊದಲ ದಿನವೇ ಒಂದು ಆನೆಯನ್ನ ಸೆರೆಹಿಡಿಯಲಾಗಿದ್ದು ಮತ್ತೊಂದು ಆನೆಯ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
https://www.youtube.com/watch?v=ITzruks1yLQ
https://www.youtube.com/watch?v=JgEUsSRfONI