alex Certify ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ವಿದ್ಯುತ್ ಅಭಾವದಿಂದ ಅನಧಿಕೃತ `ಲೋಡ್ ಶೆಡ್ಡಿಂಗ್’ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ವಿದ್ಯುತ್ ಅಭಾವದಿಂದ ಅನಧಿಕೃತ `ಲೋಡ್ ಶೆಡ್ಡಿಂಗ್’ ಜಾರಿ

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ನ ತೀವ್ರ ಕೊರತೆ ಮುಂದುವರೆದಿದ್ದು, ವಿದ್ಯುತ್ ಬೇಡಿಕೆ ಸರಾಸರಿ 15 ಸಾವಿರ ಮೆಗಾ ವ್ಯಾಟ್ ತಲುಪಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸರಾಸರಿ 15 ಸಾವಿರ ಮೆ. ವ್ಯಾಟ್ ತಲುಪಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗದೇ ನಿತ್ಯ 3 ಸಾವಿರದಿಂದ 4 ಸಾವಿರ ಮೆ. ವ್ಯಾಟ್ ನಷ್ಟು ವಿದ್ಯುತ್ ಕಡಿಮೆ ಬಳಸುವ ಮೂಲಕ ಅನಧಿಕೃತ ಲೋಡ್ ಶೆಡ್ಡಿಂಗ್ ಗೆ ಇಂಧನ ಇಲಾಖೆ ಮುಂದಾಗಿದೆ.

ವಿದ್ಯುತ್ ಕಡಿತದ ಬಗ್ಗೆ ಕೆಪಿಟಿಸಿಎಲ್ ಅನಧಿಕೃತ ಕರ್ಟೈಲ್ ಮೈಂಟ್ ಆದೇಶವಾಗಿದೆ ಎನ್ನಲಾಗಿದ್ದು, ವಿದ್ಯುತ್ ಕಡಿತ ಮಾಡಿ ಎಸ್ಕಾಂ ಗ್ರಿಡ್ ನಿಂದ ಎಷ್ಟು ವಿದ್ಯುತ್ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...