alex Certify ಇ-ಸ್ಕೂಟರ್‌ ಉತ್ಪಾದನೆಗೆ ಚುರುಕು ನೀಡಲು ಫಾಕ್ಸ್‌ಕಾನ್‌ನೊಂದಿಗೆ ಕೈಜೋಡಿಸಿದ ಅಥೆರ್‌ ಎನರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ-ಸ್ಕೂಟರ್‌ ಉತ್ಪಾದನೆಗೆ ಚುರುಕು ನೀಡಲು ಫಾಕ್ಸ್‌ಕಾನ್‌ನೊಂದಿಗೆ ಕೈಜೋಡಿಸಿದ ಅಥೆರ್‌ ಎನರ್ಜಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಅಥೆರ್‌ ಎನರ್ಜಿ ತನ್ನ ಇ-ಸ್ಕೂಟರ್‌ಗಳಿಗೆ ಪ್ರಮುಖ ಘಟಕಗಳ ತಯಾರಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿಸಲು ಬುಧವಾರದಂದು ಭಾರತ್ ಎಫ್‌ಐಹೆಚ್ ಜೊತೆಗೆ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಕಂಪನಿಯೊಂದಿಗೆ ಕೈಜೋಡಿಸಿದೆ.

ಈ ಪಾಲುದಾರಿಕೆಯು ಅಥೆರ್‌ ಎನರ್ಜಿಯ ಪ್ರಮುಖ ಉತ್ಪನ್ನಗಳಾದ ಅಥರ್ 450X ಮತ್ತು 450 ಪ್ಲಸ್‌ಗೆ ಇರುವ ಬಲವಾದ ಬೇಡಿಕೆಯನ್ನು ಪೂರೈಸಲು ಉತ್ಪಾದನಾ ವ್ಯವಸ್ಥೆಯನ್ನು ವರ್ಧಿಸುವ ಗುರಿಯನ್ನು ಹೊಂದಿದೆ.

ಮೃಗಾಲಯದಿಂದ ತಪ್ಪಿಸಿಕೊಂಡು ಹಂಗೇರಿ ರಸ್ತೆಯಲ್ಲಿ ಓಡಿದ ಪೆಂಗ್ವಿನ್…!

ಈ ಪಾಲುದಾರಿಕೆಯ ಭಾಗವಾಗಿ, ಭಾರತ್‌ ಎಫ್‌ಐಎಚ್‌ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳು, ಡ್ಯಾಶ್‌ಬೋರ್ಡ್ ಅಸೆಂಬ್ಲಿ, ಪೆರಿಫೆರಲ್ ಕಂಟ್ರೋಲಿಂಗ್ ಯೂನಿಟ್‌ಗಳು ಮತ್ತು ಡ್ರೈವ್ ಕಂಟ್ರೋಲ್ ಮಾಡ್ಯೂಲ್‌ಗಳಿಗಾಗಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಅಸೆಂಬ್ಲಿಗಳನ್ನು ಒಳಗೊಂಡಿರುವ ಉತ್ಪಾದನಾ ಸೇವೆಗಳನ್ನು ಒದಗಿಸುತ್ತವೆ.

ಎಲೆಕ್ಟ್ರಿಕ್ ವಾಹನದ (ಇವಿ) ಕಂಪನಿಗೆ ಪೂರೈಕೆ ಸರಪಳಿ ಲಾಜಿಸ್ಟಿಕ್ಸ್ ಮತ್ತು ಕಚ್ಚಾ ವಸ್ತುಗಳ ಸಂಗ್ರಹಣೆಯನ್ನು ನಿರ್ವಹಿಸುವುದು ಸೇರಿದಂತೆ ಈ ಉತ್ಪನ್ನಗಳನ್ನು ಟರ್ನ್-ಕೀ ಮಾದರಿಯಲ್ಲಿ ತಯಾರಿಸಲಾಗುವುದು.

“ಇವಿ ಉದ್ಯಮವು ವಿಭಾಗಗಳಾದ್ಯಂತ ಬಲವಾದ ಬೇಡಿಕೆಯೊಂದಿಗೆ ಅಭೂತಪೂರ್ವ ದರದಲ್ಲಿ ಬೆಳವಣಿಗೆಯನ್ನು ಮುಂದುವರೆಸಿದೆ. ನಾವು ದೇಶಾದ್ಯಂತ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಮುಂದುವರಿಸುತ್ತಿರುವುದರಿಂದ ಅಥೆರ್‌ ಎನರ್ಜಿಯು ಅಸಾಧಾರಣ ಬೆಳವಣಿಗೆಯ ನಡುವೆಯೂ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ,” ಎಂದು ಅಥೆರ್‌ ಎನರ್ಜಿ ಸಹ-ಸಂಸ್ಥಾಪಕ ಮತ್ತು ಸಿಇಓ ತರುಣ್ ಮೆಹ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಅಥೆರ್‌ ಎನರ್ಜಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ — 450X ಮತ್ತು 450 ಪ್ಲಸ್ — ಬಲವಾದ ಬೇಡಿಕೆಗಳನ್ನು ಪಡೆಯುತ್ತಿದೆ. ಹೀರೋ ಮೋಟೋಕಾರ್ಪ್ ಬೆಂಬಲಿತ ಕಂಪನಿಯು ಕಳೆದ 12 ತಿಂಗಳುಗಳಲ್ಲಿ ಅಸಾಧಾರಣವಾಗಿ ಪ್ರಗತಿ ಕಂಡಿದೆ, ತಿಂಗಳಿನಿಂದ ತಿಂಗಳ ಮಾರಾಟದಲ್ಲಿ 20 ಪ್ರತಿಶತದಷ್ಟು ಹೆಚ್ಚಳ ಕಂಡಿದ್ದು ಮತ್ತು ಮುಂಬರುವ ತಿಂಗಳುಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...