ಪೆಟ್ರೋಲ್ – ಡಿಸೇಲ್ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಪರಿಸರ ಮಾಲಿನ್ಯದ ಮಾತೂ ಕೇಳಿ ಬರ್ತಿದೆ. ಹಾಗಾಗಿ ಜನರು ಎಲೆಕ್ಟ್ರಿಕ್ ವಾಹನದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ನಾಲ್ಕು ಚಕ್ರದ ವಾಹನವೊಂದೇ ಅಲ್ಲ, ದ್ವಿಚಕ್ರ ವಾಹನಕ್ಕೂ ಬೇಡಿಕೆ ಹೆಚ್ಚಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಪ್ಲಾನ್ ನಲ್ಲಿದ್ದರೆ ಟಾಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾಹಿತಿ ಇಲ್ಲಿದೆ.
ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ : ಓಲಾ ಇತ್ತೀಚೆಗೆ ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸಿದೆ. ಓಲಾ ಎಸ್ 1 ಮತ್ತು ಓಲಾ ಎಸ್ ಪ್ರೊ ಎರಡು ವಿಭಿನ್ನ ಮಾದರಿಗಳನ್ನು ಹೊಂದಿವೆ. ಎರಡೂ ಮಾಡೆಲ್ ಗೆ ಪ್ರಾಕ್ಸಿಮಿಟಿ ಅನ್‌ಲಾಕ್, ಡಿಜಿಟಲ್ ಡ್ಯಾಶ್‌ಬೋರ್ಡ್, ವಾಯ್ಸ್ ಕಂಟ್ರೋಲ್, ಮಲ್ಟಿಪಲ್ ಪ್ರೊಫೈಲ್ ಗಳಂತಹ ಅನೇಕ ಆಕರ್ಷಕ ವೈಶಿಷ್ಟ್ಯ ನೀಡಲಾಗಿದೆ. ಓಲಾ ಎಸ್ 1 ಬೆಲೆ 99,999 ರೂಪಾಯಿಯಾಗಿದ್ದರೆ ಓಲಾ ಎಸ್ 1 ಪ್ರೊ ಆರಂಭಿಕ ಬೆಲೆ 1,29,999 ರೂಪಾಯಿಯಾಗಿದೆ.
ರಾಜಕೀಯ ಕಾರ್ಯಕರ್ತರಿಗೆ ಮುಖ್ಯ ಮಾಹಿತಿ: ವಾಹನಗಳ ಮೇಲೆ ಪಕ್ಷದ ಧ್ವಜ, ಚಿಹ್ನೆ ಬಳಕೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ
ಬಜಾಜ್ ಚೇತಕ್ : ಇ-ಸ್ಕೂಟರ್ ಚೇತಕ್ ಎರಡು ರೂಪಾಂತರಗಳಲ್ಲಿ ಬರುತ್ತದೆ. ಅರ್ಬನ್ ಮತ್ತು ಪ್ರೀಮಿಯಂ. ಪ್ರೀಮಿಯಂ ಮಾದರಿಯು ಮುಂಭಾಗದ ಡಿಸ್ಕ್ ಪಡೆದರೆ ಅರ್ಬನ್ ಮುಂಭಾಗದ ಡ್ರಮ್ ಬ್ರೇಕ್ ಹೊಂದಿದೆ. ಬಜಾಜ್ ಚೇತಕ್ ಎಲ್ಇಡಿ ಹೆಡ್ಲ್ಯಾಂಪ್ ಗಳು ಮತ್ತು ಟರ್ನ್ ಸಿಗ್ನಲ್ ಗಳು, ಡಿಜಿಟಲ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.
ರೀವಾಲ್ಟ್ ಆರ್ ವಿ 400 : ರೀವಾಲ್ಟ್ ಆರ್ ವಿ 400,3000 ಡಬ್ಲ್ಯು ಮಿಡ್ ಡ್ರೈವ್ ಮೋಟರ್ ಚಾಲಿತವಾಗಿದೆ. 72 ವಿ, 3.24 ಕೆಡಬ್ಲ್ಯುಎಚ್ ಬ್ಯಾಟರಿ ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಲು 4.5 ಗಂಟೆ ತೆಗೆದುಕೊಳ್ಳುತ್ತದೆ. ಇದರ ಬ್ಯಾಟರಿ ವಾರಂಟಿ 6 ವರ್ಷ. ಇದರ ಆರಂಭಿಕ ಬೆಲೆ 90,799 ರೂಪಾಯಿ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ : ಇದು ಟಿವಿಎಸ್ ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ. ಭಾರತದಲ್ಲಿ 1,00,752 ರೂಪಾಯಿ ಆರಂಭಿಕ ಬೆಲೆಗೆ ಇದು ಬರಲಿದೆ. ಟಿವಿಎಸ್ ಐಕ್ಯೂಬ್ ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ನೊಂದಿಗೆ ಬರುತ್ತದೆ. ಟಿವಿಎಸ್ ಐಕ್ಯೂಬ್ ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ.
ಅಥರ್ 450 ಎಕ್ಸ್ : ಅಥರ್ 450ಎಕ್ಸ್ 3.5 ಸೆಕೆಂಡುಗಳಲ್ಲಿ 40 ಕಿಲೋಮೀಟರ್ ವೇಗ ಪಡೆಯುತ್ತದೆ. ಆಂಡ್ರಾಯ್ಡ್ ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಆರಂಭಿಕ ಬೆಲೆ 1,13,416 ರೂಪಾಯಿ.