ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ಮತದಾರರು ದೂರು ಸಲ್ಲಿಸಲು ಆಯೋಗದ ವತಿಯಿಂದ ಎರಡು ವಿಶೇಷ ಅಪ್ಲಿಕೇಶನ್ ಪರಿಚಯಿಸಲಾಗಿದೆ.
ನಿಮ್ಮ ಅಭ್ಯರ್ಥಿ ಬಗ್ಗೆ ತಿಳಿಯಿರಿ -ಕೆವೈಸಿ ಹಾಗೂ ಸಿ -ವಿಜಿಲ್ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆವೈಸಿ ಆಪ್ ಮೂಲಕ ಅಭ್ಯರ್ಥಿಗಳ ವಿವರಗಳನ್ನು ಸಾರ್ವಜನಿಕರು ಪಡೆಯಬಹುದು. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳು ಕಂಡು ಬಂದಲ್ಲಿ ಸಿ -ವಿಜಿಲ್ ಆಪ್ ನಲ್ಲಿ ಮತದಾರರು ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.
ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಕೆವೈಸಿ ಆಪ್ ಲಭ್ಯವಿದೆ. ಈ ಅಪ್ಲಿಕೇಶನ್ ನಲ್ಲಿ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿ ಸಿಗಲಿದ್ದು, ಮತದಾರರು ಅಭ್ಯರ್ಥಿಗಳ ಹಿನ್ನೆಲೆ ತಿಳಿಯಲು ಸಹಾಯಕವಾಗಲಿದೆ.