ಮುಂಬೈ ಲೋಕಲ್ ರೈಲಿನಲ್ಲಿ ಚಾಕಲೇಟ್ ಮಾರಾಟ ಮಾಡುವ ವೃದ್ಧ ಮಹಿಳೆಯ ವಿಡಿಯೋ ವೈರಲ್ ಆಗಿತ್ತು. ಇದೀಗ ಪುನಃ ನೆಟ್ಟಿಗರ ಹೃದಯ ಗೆದ್ದಿದ್ದಾರೆ.
ಹೇಮಕುಂಟ್ ಫೌಂಡೇಶನ್ನ ಹರ್ತೀರತ್ ಸಿಂಗ್ ಅಹ್ಲುವಾಲಿಯಾ ಅವರು ಹಂಚಿಕೊಂಡ ಟ್ವಿಟ್ಟರ್ ಪೋಸ್ಟ್ನಲ್ಲಿ ನೆಟ್ಟಿಗರು ಪ್ರೀತಿಯಿಂದ ದಾದಿ ಜೀ ಎಂದು ಕರೆಯುವ ವೃದ್ಧ ಮಹಿಳೆಯ ಕಥೆಯನ್ನು ಹಂಚಿಕೊಂಡಿದ್ದಾರೆ.
ಸ್ವಾತಿ ಮಲಿವಾಲ್ ಹೆಸರಿನ ಆ ವೃದ್ಧೆ ಮುಂಬೈ ಲೋಕಲ್ ರೈಲಿನಲ್ಲಿ ತಿಂಡಿಗಳನ್ನು ಮಾರಾಟ ಮಾಡುವ ವೀಡಿಯೊ ವೈರಲ್ ಆದ ನಂತರ, ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಿ ಆಕೆಯ ಜೀವನವನ್ನು ಸ್ವಲ್ಪ ಸುಲಭಗೊಳಿಸಲು ಸಹಾಯ ಮಾಡಲು ನಿರ್ಧರಿಸಿದರು.
ನಾವು ದಾದಿ ಜಿಯನ್ನು ಕಂಡುಕೊಂಡೆವು, 48 ಗಂಟೆಗಳ ಹಗಲು ರಾತ್ರಿ ಹುಡುಕಾಟದ ನಂತರ ಸುಮಾರು 12 ರೈಲುಗಳ ಬದಲಾವಣೆಗಳ ನಂತರ, ನಾವು ಅಂತಿಮವಾಗಿ ದಾದಿ ಜಿಯನ್ನು ಕಂಡುಕೊಂಡಿದ್ದೇವೆ ಎಂದು ಶೀರ್ಷಿಕೆ ನೀಡಿದ್ದಾರೆ.
ಬಹಳ ಪ್ರಯತ್ನದ ನಂತರ, ಇಂದು ನಾವು ಅವರನ್ನು ಕಂಡುಕೊಂಡಾಗ, ನಮಗೆ ಆಶ್ಚರ್ಯವಾಗುವಂತೆ, ದಾದಿ ಜಿ ಯಾವುದೇ ಹಣಕಾಸಿನ ಸಹಾಯವನ್ನು ನಿರಾಕರಿಸಿದರು. ನಾವು ನಂತರ ಆಕೆ ಮಾರಾಟ ಮಾಡುತ್ತಿದ್ದ ಎಲ್ಲಾ ಚಾಕೊಲೇಟ್ಗಳನ್ನು ಖರೀದಿಸಿದೆವು ಎಂದು ಅವರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸಾವಿರಗಟ್ಟಲೆ ಲೈಕ್ ಕಾಮೆಂಟ್ ಬಂದಿದ್ದು, ದಾದಿ ಜಿಯ ಮೇಲೆ ತಮ್ಮ ಪ್ರೀತಿಯನ್ನು ಹಂಚಿದ್ದಾರೆ.