alex Certify 90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಪಾತ್ರರು ಏನಾದ್ರೂ ಸರ್ಪೈಸ್ ಉಡುಗೊರೆ ನೀಡಬಹುದಾ ಅಂತಾ ಕಾಯುತ್ತಿರುತ್ತಾರೆ. ಆ ಉಡುಗೊರೆಯು ಕೇಕ್, ಅಥವಾ ಸ್ಪೆಷಲ್ ವ್ಯಕ್ತಿ ಅಥವಾ ಇನ್ನಿತರೆ ಆಗಿರಬಹುದು. ಒಟ್ನಲ್ಲಿ ಸರ್ಪೈಸ್ ಅಂದ್ರೆ ಎಲ್ಲರೂ ಇಷ್ಟಪಟ್ಟೇ ಪಡುತ್ತಾರೆ. ಇದೀಗ ಇಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

ವೃದ್ಧೆಯೊಬ್ಬರು ಇತ್ತೀಚೆಗೆ ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ವೇಳೆ ಅವರ ಆತ್ಮೀಯ ಸ್ನೇಹಿತೆ ಅನಿರೀಕ್ಷಿತ ಭೇಟಿ ನೀಡಿದ್ದು, ಅವರಿಗೆ ಬಂದ ಸರ್ಪೈಸ್ ಆಗಿತ್ತು. ತನ್ನ ಗೆಳತಿ ಬಂದ ಕೂಡಲೇ ಆನಂದಭಾಷ್ಪ ಸುರಿಸಿದ ವೃದ್ಧೆ, ಆಕೆಯನ್ನು ತಬ್ಬಿಕೊಂಡಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು ಗುಡ್ ನ್ಯೂಸ್ ಮೂವ್‌ಮೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಇದು ಸುಮಾರು 8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ವೃದ್ಧ ಮಹಿಳೆ ತನ್ನ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ ಪ್ರವೇಶಿಸಿದ ಮಹಿಳೆಯೊಬ್ಬರು ಅವರ ಬಳಿಗೆ ನಡೆದು ಈ ಆಸನವನ್ನು ತೆಗೆದುಕೊಳ್ಳಲಾಗಿದೆಯೇ ? ಎಂದು ಪ್ರಶ್ನಿಸಿದ್ದಾರೆ. ಯಾರು ಎಂಬಂತೆ ತಲೆಯೆತ್ತಿ ನೋಡಿದಾಗ, ತನ್ನ ಆತ್ಮೀಯ ಸ್ನೇಹಿತೆಯನ್ನು ಕಂಡು ಕಣ್ಣೀರು ಸುರಿಸಿದ್ದಾರೆ. ನಂತರ ಪರಸ್ಪರ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ. ಸದ್ಯ, ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...