alex Certify ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​!

WATCH: Elderly Couple Dancing On Baseball Field Will Give You Ageing Goalsವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್​ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ.

ಬೇಸ್​ಬಾಲ್​ ಮೈದಾನದಲ್ಲಿ ವಯಸ್ಸಾದ ದಂಪತಿಗಳು ಮ್ಯೂಸಿಕ್​ಗೆ ತಕ್ಕಂತೆ ಕುಣಿಯುತ್ತಿರುವುದನ್ನು ತೋರಿಸುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

ಆ ಇಬ್ಬರೂ ಪರಸ್ಪರ ಕುಣಿತ ಆನಂದಿಸುತ್ತಿರುವುದು ಕಾಣಿಸುತ್ತದೆ. ಈ ಜೋಡಿಯು ಎಷ್ಟು ಚೆನ್ನಾಗಿ ಮಿಳಿತವಾಗಿದೆ ಎಂದರೆ ಇವರಿಬ್ಬರೂ ಡ್ಯಾನ್ಸ್​ ಕ್ಲಾಸ್​ನಲ್ಲಿ ತರಬೇತಿ ಪಡೆದಂತೆ ಸ್ಟೆಪ್​ಗಳನ್ನು ಹಾಕಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಬಹಳ ಖುಷಿಪಟ್ಟಿದ್ದಾರೆ. ಈವರೆಗೆ ಸುಮಾರು 12 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸಾವಿರಾರು ಕಾಮೆಂಟ್​ ಬಂದಿದೆ. “ಓ ದೇವರೇ, ಇದು ಅದ್ಭುತವಾಗಿದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬರು, ಇದು ನನಗೆ ಜೀವನವನ್ನು ನೀಡುತ್ತಿದೆ ! ಇಷ್ಟ ಪಡುತ್ತೇನೆ ! ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಿಯಾಮಿ ಮಾಲಿರ್ನ್ಸ್​ ಮತ್ತು ಲಾಸ್​ ಏಂಜಲೀಸ್​ ಡಾಡ್ಜರ್ಸ್​ ನಡುವೆ ಆ.29 ರಂದು ನಡೆದ ಬೇಸ್​ಬಾಲ್​ ಆಟಕ್ಕೂ ಮುನ್ನ ಈ ದಂಪತಿ ಕುಣಿದಿದ್ದಾರೆ.

ಈ ದಂಪತಿ ಜಾಲತಾಣದಲ್ಲಿ ಸಾಕಷ್ಟು ಫಾಲೋಯರ್​ಗಳನ್ನು ಹೊಂದಿದ್ದು, ಸಾಕಷ್ಟು ಜನಪ್ರಿಯ ನೃತ್ಯ ಮಾಡಿದ್ದಾರೆ. ಅವರ ಒಂದು ವಿಡಿಯೊ ಸುಮಾರು 4 ಕೋಟಿ ವೀಕ್ಷಣೆಗಳನ್ನು ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...