ವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ.
ಬೇಸ್ಬಾಲ್ ಮೈದಾನದಲ್ಲಿ ವಯಸ್ಸಾದ ದಂಪತಿಗಳು ಮ್ಯೂಸಿಕ್ಗೆ ತಕ್ಕಂತೆ ಕುಣಿಯುತ್ತಿರುವುದನ್ನು ತೋರಿಸುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಆ ಇಬ್ಬರೂ ಪರಸ್ಪರ ಕುಣಿತ ಆನಂದಿಸುತ್ತಿರುವುದು ಕಾಣಿಸುತ್ತದೆ. ಈ ಜೋಡಿಯು ಎಷ್ಟು ಚೆನ್ನಾಗಿ ಮಿಳಿತವಾಗಿದೆ ಎಂದರೆ ಇವರಿಬ್ಬರೂ ಡ್ಯಾನ್ಸ್ ಕ್ಲಾಸ್ನಲ್ಲಿ ತರಬೇತಿ ಪಡೆದಂತೆ ಸ್ಟೆಪ್ಗಳನ್ನು ಹಾಕಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಬಹಳ ಖುಷಿಪಟ್ಟಿದ್ದಾರೆ. ಈವರೆಗೆ ಸುಮಾರು 12 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸಾವಿರಾರು ಕಾಮೆಂಟ್ ಬಂದಿದೆ. “ಓ ದೇವರೇ, ಇದು ಅದ್ಭುತವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, ಇದು ನನಗೆ ಜೀವನವನ್ನು ನೀಡುತ್ತಿದೆ ! ಇಷ್ಟ ಪಡುತ್ತೇನೆ ! ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಿಯಾಮಿ ಮಾಲಿರ್ನ್ಸ್ ಮತ್ತು ಲಾಸ್ ಏಂಜಲೀಸ್ ಡಾಡ್ಜರ್ಸ್ ನಡುವೆ ಆ.29 ರಂದು ನಡೆದ ಬೇಸ್ಬಾಲ್ ಆಟಕ್ಕೂ ಮುನ್ನ ಈ ದಂಪತಿ ಕುಣಿದಿದ್ದಾರೆ.
ಈ ದಂಪತಿ ಜಾಲತಾಣದಲ್ಲಿ ಸಾಕಷ್ಟು ಫಾಲೋಯರ್ಗಳನ್ನು ಹೊಂದಿದ್ದು, ಸಾಕಷ್ಟು ಜನಪ್ರಿಯ ನೃತ್ಯ ಮಾಡಿದ್ದಾರೆ. ಅವರ ಒಂದು ವಿಡಿಯೊ ಸುಮಾರು 4 ಕೋಟಿ ವೀಕ್ಷಣೆಗಳನ್ನು ಗಳಿಸಿದೆ.