ನವದಂಪತಿಗಳಿಗೆ ದಾಂಪತ್ಯದ ಸಾಮರಸ್ಯದ ಗೋಲ್ ಸೃಷ್ಟಿಸುವ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಹಿರಿಯ ಬೆಂಗಾಲೀ ದಂಪತಿಗಳು ಇಳಿ ವಯಸ್ಸಿನಲ್ಲೂ ಪರಸ್ಪರ ಅನ್ಯೋನ್ಯತೆಯಿಂದ ಇರುವ ಈ ವಿಡಿಯೋ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
ಸೊಪ್ಪು ಬಿಡಿಸುತ್ತಿರುವ ತನ್ನ ಮಡದಿಗೆ ಊರುಗೋಲಿನಲ್ಲಿ ಹಾಗೇ ತಮಾಷೆಯಾಗಿ ಕೆಣಕುವ ಹಿರಿಯ ಪುರುಷ ಮಡದಿಯ ಮುಂದೆ ಹಾಗೇ ಮಗುವಿನಂತಾಗುವುದನ್ನು ನೋಡುವುದೇ ಚಂದ.
ಪತಿರಾಯನ ಈ ಚೇಷ್ಟೆಗೆ ಹಾಗೇ ಬೆಂಗಾಲಿಯಲ್ಲಿ ಏನೋ ಹೇಳುವ ಹಿರಿಯ ಮಹಿಳೆ, ಪತಿಯ ಕೆದರಿದ ಕೂದಲನ್ನು ಬಾಚುತ್ತಾರೆ.
ಕೋಲ್ಕತ್ತಾ ಚಿತ್ರೋಗ್ರಾಫಿ ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.