alex Certify BIG NEWS: ಈದ್-ಉಲ್-ಫಿತರ್ 2022 ಚಂದ್ರನ ದರ್ಶನ: ನಾಳೆಯೇ ರಂಜಾನ್ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈದ್-ಉಲ್-ಫಿತರ್ 2022 ಚಂದ್ರನ ದರ್ಶನ: ನಾಳೆಯೇ ರಂಜಾನ್ ಆಚರಣೆ

ವಿಶ್ವದ 1.5 ಶತಕೋಟಿ ಮುಸ್ಲಿಮರು ಮೇ 2 ರಂದು ಪವಿತ್ರ ರಂಜಾನ್ ಆಚರಿಸಲಿದ್ದಾರೆ. ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಶನಿವಾರ ಅರ್ಧಚಂದ್ರ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಈದ್ ಉಲ್-ಫಿತರ್ ಅನ್ನು ಸೌದಿ ಅರೇಬಿಯಾ ಮತ್ತು ಯುಎಇ ಸೋಮವಾರ ಆಚರಿಸಲಿದೆ. ಲೆಬನಾನ್, ಲಿಬಿಯಾ, ಈಜಿಪ್ಟ್ ಮತ್ತು ಮಾರಿಟಾನಿಯಾ ಸೋಮವಾರ ಈದ್ ಅನ್ನು ಆಚರಿಸಲಿವೆ ಎಂದು ಖಗೋಳ ಕೇಂದ್ರ ತಿಳಿಸಿದೆ.

ಈದ್-ಉಲ್-ಫಿತರ್ ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಆದರೆ ರಜೆಯ ಆರಂಭವು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಈದ್‌ ಆರಂಭ ಸಾಂಪ್ರದಾಯಿಕವಾಗಿ ಅಮಾವಾಸ್ಯೆ, ಚಂದ್ರ ದರ್ಶನ ಆಧರಿಸಿದೆ. ಇದು ಕೆಲವೊಮ್ಮೆ ಖಗೋಳ ಲೆಕ್ಕಾಚಾರಗಳಿಂದ ಭಿನ್ನವಾಗಿರುತ್ತದೆ ಮತ್ತು ಭೌಗೋಳಿಕ ಸ್ಥಳದ ಪ್ರಕಾರ ಬದಲಾಗುತ್ತದೆ. ಈದ್-ಉಲ್-ಫಿತರ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಇದು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳಾದ ಶಾವಾಲ್‌ ನ ಮೊದಲ ದಿನದಂದು ಇದನ್ನು ಆಚರಿಸಲಾಗುತ್ತದೆ.

ಈದ್-ಉಲ್-ಫಿತರ್ ಅನ್ನು ರಂಜಾನ್ ಕೊನೆಯಲ್ಲಿ ತಿಂಗಳ ಉಪವಾಸವನ್ನು ಮುರಿಯುವ ಹಬ್ಬ ಎಂದೂ ಕರೆಯುತ್ತಾರೆ. ರೋಜಾ ಎಂದು ಕರೆಯಲ್ಪಡುವ ಉಪವಾಸ ಸಾಮಾನ್ಯವಾಗಿ ರಂಜಾನ್‌ನ 30 ನೇ ದಿನದಂದು ಸಂಭವಿಸುವ ಅರ್ಧಚಂದ್ರನ ರಾತ್ರಿಯ ಆಚರಣೆಗಳೊಂದಿಗೆ ಕೊನೆಗೊಳ್ಳುತ್ತವೆ.

ಭಾರತದಲ್ಲಿ ಈದ್ ಯಾವಾಗ…?

ಮೇ 2 ರಂದು ಸೋಮವಾರ ಈದ್ ಆಚರಿಸುವುದಾಗಿ ಸೌದಿ ಅರೇಬಿಯಾ, ಯುಎಇ ಘೋಷಿಸಿದ್ದರೂ ಭಾರತದಲ್ಲಿ ಚಂದ್ರನ ದರ್ಶನದ ನಿಖರವಾದ ಸಮಯವನ್ನು ಇನ್ನೂ ದೃಢಪಡಿಸಲಾಗಿಲ್ಲ. ರಾಜ್ಯದಲ್ಲಿ ಮೇ 2 ರಂದು ಸರ್ಕಾರ ರಜೆ ಘೋಷಣೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...