ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ, 4.3 ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾದ ನಾಲ್ಕು ಕಾಲುಗಳಿರುವ ತಿಮಿಂಗಿಲವೊಂದರ ಅಸ್ಥಿಯ ಪಳೆಯುಳಿಕೆಯನ್ನು ಈಜಿಪ್ಟಿಯನ್ ವಿಜ್ಞಾನಿಗಳು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಈಜಿಪ್ಟ್‌ನ ಮರುಭೂಮಿ ಪ್ರದೇಶದ ಪಶ್ಚಿಮ ಭಾಗದಲ್ಲಿ ಪತ್ತೆಯಾದ ಈ ಅಸ್ಥಿ ಅರೆ-ಜಲಚರ ಜೀವಿಯಾಗಿದ್ದು, ನೆಲ ಹಾಗೂ ಭೂಮಿ ಮೇಲೂ ವಾಸಿಸುತ್ತಿತ್ತು ಎನ್ನಲಾಗಿದೆ. ನಿಷ್ಣಾತ ಬೇಟೆಗಾರನ ಎಲ್ಲ ಲಕ್ಷಣಗಳೂ ಈ ಜೀವಿಯಲ್ಲಿ ಕಾಣುತ್ತವೆ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಹೆಶಮ್ ಸಲ್ಲಂ ತಿಳಿಸಿದ್ದಾರೆ.
ನ್ಯೂ ಶಾಹು ʼಪ್ಯಾಲೇಸ್ʼ ನೋಡಿದ್ದೀರಾ…..?
ಇತಿಹಾಸ ಪೂರ್ವ ಕಾಲದಲ್ಲಿ ಸಮುದ್ರದ ತಳದಲ್ಲಿದ್ದ ಜಾಗವೊಂದರಲ್ಲಿ ಈ ಪಳೆಯುಳಿಕೆಯನ್ನು 2008ರಲ್ಲಿ ಈಜಿಪ್ಟಿಯನ್ ಪರಿಸರವಾದಿಗಳು ಮೊದಲ ಬಾರಿಗೆ ಕಂಡುಕೊಂಡಿದ್ದರು. ಈ ಬಗ್ಗೆ ಅಧ್ಯಯನ ನಡೆಸಿದ ಸಂಶೋಧಕರು ಇದೀಗ ತಾನೇ ಹೊಸ ತಳಿಯ ಜೀವಿಯ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ತಜ್ಞರೆಲ್ಲಾ ಸೇರಿ ತಿಮಿಂಗಿಲದ ಅಸ್ಥಿಯನ್ನು ಜೋಡಣೆ ಮಾಡಿ ಅದಕ್ಕೊಂದು ಅಂತಿಮ ರೂಪ ಕೊಟ್ಟ ಬಳಿಕ, 2017ರಿಂದ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ.
ಸಂಪೂರ್ಣ ಚಲಚರ ಜೀವಿಗಳಾದ ತಿಮಿಂಗಿಲಗಳ ಜೀವ ವಿಕಸನದ ಬಗ್ಗೆ ಅಧ್ಯಯನ ನಡೆಸಲು ಈ ಪಳೆಯುಳಿಕೆ ನೆರವಾಗಲಿದೆ. ತಿಮಿಂಗಿಲಗಳು ಇಂದಿನ ಆಕಾರಕ್ಕೆ ಒಂದು ಕೋಟಿ ವರ್ಷಗಳ ಹಿಂದೆ ಮಾರ್ಪಾಡಾಗಿವೆ.