alex Certify ‘ಶಕ್ತಿ ಯೋಜನೆ’ ಎಫೆಕ್ಟ್ : ಬಸ್ ನಿಲ್ಲಿಸದ ಚಾಲಕರ ವಿರುದ್ಧ ವಿದ್ಯಾರ್ಥಿನಿಯರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶಕ್ತಿ ಯೋಜನೆ’ ಎಫೆಕ್ಟ್ : ಬಸ್ ನಿಲ್ಲಿಸದ ಚಾಲಕರ ವಿರುದ್ಧ ವಿದ್ಯಾರ್ಥಿನಿಯರ ಆಕ್ರೋಶ

ತುಮಕೂರು : ‘ಶಕ್ತಿ ಯೋಜನೆ’ ಪರಿಣಾಮದ ಹಿನ್ನೆಲೆ ಬಸ್ ಗಳು ತುಂಬಿ ತುಳುಕುತ್ತಿದ್ದು, ಶಾಲೆ-ಕಾಲೇಜಿಗೆ ಹೋಗಲು ಬಹಳ ತೊಂದರೆಯಾಗುತ್ತಿದೆ. ಚಾಲಕರು ಬಸ್ ನಿಲ್ಲಿಸದೇ ಹೋಗುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ತಾಲೂಕಿನ ನೆಲಹಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಸ್ ನಿಲ್ಲಿಸದಿದ್ದಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಚಾಲಕ ಗಲಾಟೆಗೆ ಹೋಗಿದ್ದಾರೆ ಎನ್ನಲಾಗಿದೆ. KSRTC ಚಾಲಕ ವಿದ್ಯಾರ್ಥಿನಿಯರ ಮೇಲೆ ಅವಾಜ್ ಹಾಕಿದ್ದಾರೆ. ಚಾಲಕರು ಬಸ್ ನಿಲ್ಲಿಸದೇ ಹೋಗುತ್ತಿದ್ದಾರೆ, ನಮಗೆ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವು ದಿನಗಳ ಹಿಂದೆ ಬಸ್ ನಿಲ್ಲಿಸಿದ ಹಿನ್ನೆಲೆ ಸರ್ಕಾರಿ ಬಸ್ ಗೆ ವಿದ್ಯಾರ್ಥಿಯೋರ್ವ ಕಲ್ಲು ತೂರಿರುವ ಘಟನೆ ವರದಿಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...