alex Certify ವರ್ಷದ ಮೊದಲ ಸೂರ್ಯ ಗ್ರಹಣಕ್ಕೂ ಮುನ್ನ ಈ ರಾಶಿಯವರು ಎಚ್ಚರದಿಂದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದ ಮೊದಲ ಸೂರ್ಯ ಗ್ರಹಣಕ್ಕೂ ಮುನ್ನ ಈ ರಾಶಿಯವರು ಎಚ್ಚರದಿಂದಿರಿ

ಜ್ಯೋತಿಷಿಗಳ ಪ್ರಕಾರ, 2024 ರ ಮೊದಲ ಸೂರ್ಯಗ್ರಹಣ  ಏಪ್ರಿಲ್ ತಿಂಗಳಲ್ಲಿ ಸಂಭವಿಸಲಿದೆ. ಸೂರ್ಯಗ್ರಹಣ ಅನೇಕ ದೇಶಗಳಲ್ಲಿ ಗೋಚರಿಸಲಿದೆ. ಆದ್ರೆ ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಸೂರ್ಯ ಗ್ರಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಗ್ರಹ – ನಕ್ಷತ್ರದಲ್ಲಾಗುವ ಬದಲಾವಣೆ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸೂರ್ಯ ಗ್ರಹಣಕ್ಕಿಂತ ಮೊದಲು ಕೆಲ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಅನೇಕರು ಸಮಸ್ಯೆಗಳನ್ನು ಎದುರಿಸುತ್ತಾರೆ.

ವೃಷಭ : 2024 ರ ಮೊದಲ ಸೂರ್ಯಗ್ರಹಣವು  ವೃಷಭ ರಾಶಿಯವರಿಗೆ ಒಳ್ಳೆಯದಲ್ಲ. ಗ್ರಹಣದಿಂದಾಗಿ ಕೆಲ ಸಮಸ್ಯೆ ಎದುರಾಗುತ್ತದೆ. ಹಣಕಾಸಿನ ತೊಂದರೆ ಕಾಡುತ್ತದೆ. ವಿವಾಹಿತರ ಜೀವನದಲ್ಲಿ ಪ್ರಕ್ಷುಬ್ಧತೆ ಉಂಟಾಗಬಹುದು. ನೆರೆಹೊರೆಯವರೊಂದಿಗೆ ಜಗಳವಾಗುವ ಸಾಧ್ಯತೆಯೂ ಇದೆ.

ಕರ್ಕ : ವರ್ಷದ ಮೊದಲ ಸೂರ್ಯಗ್ರಹಣವನ್ನು ಕರ್ಕ ರಾಶಿಯವರಿಗೆ ಅಶುಭವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ಅನೇಕ ರೀತಿಯ ಸಮಸ್ಯೆ ಉದ್ಭವಿಸಬಹುದು. ವ್ಯಾಪಾರದಲ್ಲಿ ನಷ್ಟ ಆಗುವ ಸಾಧ್ಯತೆ ಇದೆ. ನೆಮ್ಮದಿ ಇಲ್ಲದ ಜೀವನ ನಿಮ್ಮದಾಗಲಿದೆ.

ತುಲಾ ರಾಶಿ : ಮೊದಲ ಸೂರ್ಯಗ್ರಹಣ ತುಲಾ ರಾಶಿಯವರಿಗೂ ಮಂಗಳಕರವಾಗಿರೋದಿಲ್ಲ. ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ವ್ಯಾಪಾರದಲ್ಲೂ ಪ್ರಗತಿ ಇರೋದಿಲ್ಲ. ಇದರಿಂದ ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಒಳ್ಳೆಯದು.

ವೃಶ್ಚಿಕ : ಈ ರಾಶಿಯವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ವೈಯಕ್ತಿಕ ಜೀವನದ ಜೊತೆ ವ್ಯಾಪಾರದಲ್ಲೂ ನಷ್ಟವಾಗುತ್ತದೆ. ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಧನು : ಮೊದಲ ಸೂರ್ಯ ಗ್ರಹಣ ನಿಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಕೆಲಸ ಕ್ಷೇತ್ರದಲ್ಲಿ ತೊಂದರೆ ಕಾಡಲಿದೆ. ಕೆಲಸದಲ್ಲಿ ಒತ್ತಡ ಉಂಟಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...