alex Certify BIG NEWS : ‘ವಿದ್ಯಾಂಜಲಿ 2.0’ ಪೊರ್ಟಲ್ ನಲ್ಲಿ ಎಲ್ಲಾ ಶಾಲೆಗಳನ್ನು ನೋಂದಣಿ ಮಾಡುವಂತೆ ‘ಶಿಕ್ಷಣ ಇಲಾಖೆ’ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ‘ವಿದ್ಯಾಂಜಲಿ 2.0’ ಪೊರ್ಟಲ್ ನಲ್ಲಿ ಎಲ್ಲಾ ಶಾಲೆಗಳನ್ನು ನೋಂದಣಿ ಮಾಡುವಂತೆ ‘ಶಿಕ್ಷಣ ಇಲಾಖೆ’ ಸೂಚನೆ

ಬೆಂಗಳೂರು : ‘ವಿದ್ಯಾಂಜಲಿ 2.0’ ಪೊರ್ಟಲ್ ನಲ್ಲಿ ಎಲ್ಲಾ ಶಾಲೆಗಳನ್ನು ನೋಂದಣಿ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಈ ಬಗ್ಗೆ ರಾಜ್ಯ ಯೋಜನಾ ನಿರ್ದೇಶಕರು , ಸಮಗ್ರ ಶಿಕ್ಷಣ ಕರ್ನಾಟಕ ಇವರು ಸುತ್ತೋಲೆ ಹೊರಡಿಸಿದ್ದು, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಭಾರತ ಸರ್ಕಾರವು ಶಾಲಾ ಶಿಕ್ಷಣದಲ್ಲಿ ಸಮುದಾಯ, ಸ್ವಯಂ ಸೇವಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕೊಡುಗೆ/ಸೇವೆಗಳನ್ನು ಗುರುತಿಸಿ ಶಾಲೆಗಳಿಗೆ ಸದುಪಯೋಗವಾಗುವಂತೆ ಮಾಡಲು ವಿದ್ಯಾಂಜಲಿ 20 ಕಾರ್ಯಕ್ರಮದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯಕ್ರಮವು ಶಾಲೆಗಳೊಂದಿಗೆ ಸಮುದಾಯ, ಸ್ವಯಂ ಸೇವಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸ್ವಯಂ ಪ್ರೇರಿತ ಕೊಡುಗೆಗಳನ್ನು ಹಾಗೂ ಸೇವೆಗಳನ್ನು ಒಟ್ಟುಗೊಡಿಸುವ ಒಂದು ವೇದಿಕೆಯಾಗಿದೆ.

ಈ ಹಿಂದಿನ ಸುತ್ತೋಲೆಗಳನ್ವಯ ಈಗಾಗಲೇ ವಿದ್ಯಾಂಜಲಿ 2.0 ಕಾರ್ಯಕ್ರಮದ ಪೋರ್ಟಲ್ ನಲ್ಲಿ ರಾಜ್ಯದ 44880 ಶಾಲೆಗಳು ನೋಂದಾಯಿಸಿಕೊಂಡಿರುತ್ತವೆ. ಉಲ್ಲೇಖ 3 ರ ಅನ್ವಯ ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಭಾರತ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ ಎಲ್ಲಾ ಸರ್ಕಾರಿ /ಅನುದಾನಿತ ಪ್ರಾಥಮಿಕ/ಪ್ರೌಢಶಾಲೆಗಳನ್ನು ಶೇಕಡ100 ರಷ್ಟು ವಿದ್ಯಾಂಜಲಿ 20 ಪೋರ್ಟಲ್ ನಲ್ಲಿ ನೋಂದಣಿ ಮಾಡುವಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುತ್ತಾರೆ. ಅದರಂತೆ ರಾಜ್ಯದ ಎಲ್ಲಾ ಜಿಲ್ಲಾ ನೋಡಲ್ ಅಧಿಕಾರಿಗಳು (ಡಿವೈಪಿಸಿ ಕಾರ್ಯಕ್ರಮ)ರವರು ತ್ವರಿತವಾಗಿ ಈ ನಿಟ್ಟಿನಲ್ಲಿ ಕ್ರಮ ವಹಿಸಿ ಶಾಲೆಗಳ ನೋಂದಾವಣಿಯನ್ನು, ವಿದ್ಯಾಂಜಲಿ 20ರಲ್ಲಿ ಶೇಕಡ100 ರಷ್ಟು ಸಾಧಿಸುವುದು ಹಾಗೂ ಶಾಲೆಗಳ ಅವಶ್ಯಕತೆ (ಸೇವೆಗಳು ಕೊಡುಗೆಗಳನ್ನು ಪೋರ್ಟಿನಲ್ಲಿ ನಮೂದಿಸುವುದು ಮತ್ತು ಶಾಲೆಗೆ ಅಗತ್ಯ ಸೇವೆ ನೀಡ ಬಯಸುವ ಸ್ವಯಂ ಸೇವಕರ ನೋಂದಣಿಯನ್ನು ಪೋರ್ಟಿನಲ್ಲಿ http://vidyanjali.education.gov.in ಲಿಂಕ್ ನ್ನು ಬಳಸಿ ನೋಂದಣಿ ಮಾಡುವ ಬಗ್ಗೆ ಶಾಲಾ ಮುಖ್ಯ ಸ್ಮರಿಗೆ ಸೂಕ್ತ ಮಾರ್ಗದರ್ಶನ ನೀಡುವುದು. ಶಾಲೆಗಳ ನೋಂದಾವಣಿಯನ್ನು ವಿದ್ಯಾಂಜಲಿ 20 ಶೇಕಡ100 ರಷ್ಟುನ್ನು ನವೆಂಬರ್ ಮಾಹೆಯ ಒಳಗೆ ಪೂರ್ಣ ಗೊಳಿಸುವುದು. ವಿದ್ಯಾಂಜಲಿ ಪೋರ್ಟಲ್ನ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡುವ ಸಲುವಾಗಿ ಪ್ರತಿ ಶಾಲೆಗಳಲ್ಲಿ ವಿದ್ಯಾಂಜಲಿ ಜಾಹಿರಾತು ಫಲಕಗಳನ್ನು ಪ್ರದರ್ಶಿಸುವುದು.ಮುಂದುವರೆದು ಅನುಬಂಧ 1ರಲ್ಲಿ ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು,ನೀಡಲಾಗಿರುವ ಮಾಹಿತಿಯನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...