alex Certify Economic Survey 2022: ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Economic Survey 2022: ಚಿಪ್ ಕೊರತೆಯಿಂದಾಗಿ 7 ಲಕ್ಷ ಕಾರುಗಳ ಆರ್ಡರ್‌ಗಳ ಡೆಲಿವರಿ ಇನ್ನೂ ಬಾಕಿ

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಡಿಸೆಂಬರ್ 2021 ರ ವೇಳೆಗೆ ಕಾರು ತಯಾರಕರು 7 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮುಂದೂಡಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿ ಮಾಡಿದೆ.

ಪೂರೈಕೆಯಲ್ಲಿನ ವಿಳಂಬದ ಪರಿಣಾಮವಾಗಿ, 2021 ರಲ್ಲಿ ಉದ್ಯಮಕ್ಕೆ ಸರಾಸರಿ ಕಾಯುವ ಸಮಯ (ಆರ್ಡರ್ ದಿನಾಂಕ ಮತ್ತು ಆಟೋಮೊಬೈಲ್ ರವಾನೆಯಾಗುವ ನಡುವಿನ ಅಂತರ) ಸರಿಸುಮಾರು 14 ವಾರಗಳು.

ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ

ಆರ್ಥಿಕ ಸಮೀಕ್ಷೆ 2021-22 ಭಾರತದಲ್ಲಿ ಆಟೋಮೊಬೈಲ್ ವಲಯದಲ್ಲಿ ಇದೇ ರೀತಿಯ ಪ್ರವೃತ್ತಿ ಇರುವುದಾಗಿ ತೋರಿದೆ. ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘಟನೆ (ಎಸ್‌ಐಎಂ) ಪ್ರಕಾರ, ಡಿಸೆಂಬರ್ 2021ರಲ್ಲಿ, ಕಾರು ಉತ್ಪಾದಕರು ದೇಶೀಯ ಮಾರುಕಟ್ಟೆಯಲ್ಲಿ 2,19,421 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದ್ದು, 2020ಕ್ಕೆ ಹೋಲಿಸಿದರೆ ಮಾರಾಟದಲ್ಲಿ ಈ ಅಂಕಿಅಂಶದಲ್ಲಿ 13% ಕಡಿಮೆಯಾಗಿದೆ.

“ಇದು ಬೇಡಿಕೆಯ ಸಮಸ್ಯೆಯಲ್ಲ ಆದರೆ ಪೂರೈಕೆಯ ಸಮಸ್ಯೆಯಾಗಿದೆ. ವಿವಿಧ ಕಾರು ತಯಾರಕರ ವೆಬ್‌ಸೈಟ್‌ಗಳ ಮಾಹಿತಿಯು ಡಿಸೆಂಬರ್ 2021ರ ಹೊತ್ತಿಗೆ 7 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳ ಪೂರೈಕೆ ಬಾಕಿ ಇರುವುದನ್ನು ಬಹಿರಂಗಪಡಿಸುತ್ತದೆ,” ಎಂದು ಸಮೀಕ್ಷೆಯು ಗಮನಿಸಿದೆ.

ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಅರೆವಾಹಕಗಳ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ. ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಮ್ಯಾನುಫ್ಯಾಕ್ಚರಿಂಗ್ ವಾತಾವರಣ ಅಭಿವೃದ್ಧಿಗೆ ಸರ್ಕಾರ 76,000 ಕೋಟಿ ರೂ. ತೆಗೆದಿರಿಸಿದೆ.

ಜಾಗತಿಕ ಆರ್ಥಿಕತೆಯಲ್ಲಿ ಪೂರೈಕೆ ಸರಪಳಿಗಳಲ್ಲಿನ ತೀವ್ರ ಅಡೆತಡೆಗಳು ಅರೆವಾಹಕಗಳ ತೀವ್ರ ಕೊರತೆಯನ್ನು ಉಂಟುಮಾಡಿರುವ ಸಮಯದಲ್ಲಿ ಈ ಉದ್ಯಮವನ್ನು ಉತ್ತೇಜಿಸಲು ಸರ್ಕಾರದ ಮಧ್ಯಪ್ರವೇಶ ಉತ್ತಮವಾದ ಬೆಳವಣಿಗೆ ಎಂದು ಸಮೀಕ್ಷೆಯು ಗಮನಿಸಿದೆ.

ಪೂರೈಕೆ ಸರಪಳಿಯಲ್ಲಿನ ಸ್ಥಗಿತದಿಂದಾಗಿ ಹಲವಾರು ವಿಭಿನ್ನ ಕೈಗಾರಿಕೆಗಳ ಕಂಪನಿಗಳು ಸ್ಥಗಿತಗೊಂಡಿವೆ ಅಥವಾ ಉತ್ಪಾದನೆಯನ್ನು ಮೊಟಕುಗೊಳಿಸಿವೆ ಎಂದು ವರದಿ ಹೇಳಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...