alex Certify ತೂಕ ಇಳಿಸಲು ಅಧಿಕ ಪ್ರೋಟೀನ್ ಆಹಾರ ಸೇವಿಸ್ತಿದ್ದೀರಾ ? ಎಚ್ಚರ ಇದು ಕೂಡ ಆಗಬಹುದು ಹಾನಿಕಾರಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಅಧಿಕ ಪ್ರೋಟೀನ್ ಆಹಾರ ಸೇವಿಸ್ತಿದ್ದೀರಾ ? ಎಚ್ಚರ ಇದು ಕೂಡ ಆಗಬಹುದು ಹಾನಿಕಾರಕ…!

ತೂಕವನ್ನು ನಿಯಂತ್ರಿಸಲು ಬಯಸುವವರಿಗೆ ಅಧಿಕ ಪ್ರೋಟೀನ್ ಇರುವ ಆಹಾರವು ತುಂಬಾ ಸಹಾಯಕವಾಗಿದೆ. ಹೆಚ್ಚಿನ ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸುವಂತೆ ಸಲಹೆ ಕೂಡ ನೀಡಲಾಗುತ್ತದೆ. ಆದರೆ ಹೈ ಪ್ರೋಟೀನ್‌ ಆಹಾರಗಳನ್ನು ಮಿತಿಮೀರಿ ಸೇವಿಸುವಂತಿಲ್ಲ, ಈ ಡಯಟ್‌ನಲ್ಲಿ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಅಧಿಕ ಪ್ರೋಟೀನ್‌ನ ಅಡ್ಡ ಪರಿಣಾಮಗಳು

ಪ್ರೋಟೀನ್ ದೇಹಕ್ಕೆ ಬಹಳ ಮುಖ್ಯವಾಗಿ ಬೇಕಾದ ಪೋಷಕಾಂಶ. ಇದರ ಸೇವನೆಯು ಸ್ನಾಯುಗಳು, ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಯಾವುದೇ ಗಂಭೀರವಾದ ಗಾಯದಿಂದ ಚೇತರಿಸಿಕೊಳ್ಳಲು ಪ್ರೋಟೀನ್ ಸಹಾಯ ಮಾಡುತ್ತದೆ. ಇದು ತೂಕವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಬೊಜ್ಜನ್ನು ತಡೆಯುತ್ತದೆ. ಅದಕ್ಕಾಗಿಯೇ ಆಹಾರದಲ್ಲಿ ಪ್ರೋಟೀನ್ ಅನ್ನು ಸೇರಿಸಲು ಸಲಹೆ ನೀಡಲಾಗುತ್ತದೆ.

ಅನೇಕರು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಅಥವಾ ಬಾಡಿ ಬಿಲ್ಡ್‌ ಮಾಡಲು ಹೆಚ್ಚಿನ ಪ್ರೋಟೀನ್ ತೆಗೆದುಕೊಳ್ಳುತ್ತಾರೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಇದರಲ್ಲೂ ಅನೇಕ ಅನಾನುಕೂಲಗಳಿವೆ.

ಪ್ರೋಟೀನ್‌ಭರಿತ ಆಹಾರ ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ರಕ್ತದೊತ್ತಡವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ.

ಎಷ್ಟು ಪ್ರೋಟೀನ್ ತೆಗೆದುಕೊಳ್ಳಬೇಕು ?

ಆರೋಗ್ಯ ತಜ್ಞರ ಪ್ರಕಾರ ವಯಸ್ಕರು ಪ್ರತಿ ಕಿಲೋಗ್ರಾಂ ತೂಕಕ್ಕೆ ಕನಿಷ್ಠ 0.8 ಗ್ರಾಂ ಪ್ರೋಟೀನ್ ತೆಗೆದುಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ತೆಗೆದುಕೊಂಡಾಗ, ಅದನ್ನು ಹೈ ಪ್ರೋಟೀನ್ ಎಂದು ಕರೆಯಲಾಗುತ್ತದೆ. ವ್ಯಾಯಾಮ ಮಾಡುವವರು ಹೆಚ್ಚಿನ ಪ್ರೋಟೀನ್ ತೆಗೆದುಕೊಳ್ಳಬಹುದು.

ಆರೋಗ್ಯ ತಜ್ಞರ ಪ್ರಕಾರ ಕಿಡ್ನಿ ಸಂಬಂಧಿತ ಸಮಸ್ಯೆಗಳಿದ್ದರೆ ಅವರು ಹೆಚ್ಚಿನ ಪ್ರೋಟೀನ್ ಇರುವ ಆಹಾರವನ್ನು ತಪ್ಪಿಸಬೇಕು. ಇದರಿಂದ ಅವರಿಗೆ ಅನಾನುಕೂಲಗಳಾಗಬಹುದು. ವೈದ್ಯರ ಸಲಹೆ ಪಡೆಯದೇ ಸೇವಿಸುವುದು ಕೂಡ ಅಪಾಯಕಾರಿ.

ಹೆಚ್ಚಿನ ಪ್ರೋಟೀನ್ ಆಹಾರದ ಅನಾನುಕೂಲತೆ

ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ಹೊಟ್ಟೆ ತುಂಬಿರುತ್ತದೆ. ಈ ಕಾರಣದಿಂದಾಗಿ, ಜನರು ಫೈಬರ್‌ನಂತಹ ಇತರ ಪೋಷಕಾಂಶಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆ ಕಾಡುತ್ತಲೇ ಇರುತ್ತದೆ.

ಹೆಚ್ಚಿನ ಪ್ರೊಟೀನ್ ಸೇವಿಸುವುದರಿಂದ ಕಿಡ್ನಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಕಿಡ್ನಿ ಸಂಬಂಧಿತ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಹೆಚ್ಚಿನ ಪ್ರೋಟೀನ್ ಆಹಾರದೊಂದಿಗೆ ನೀವು ನೀರಿನ ಪ್ರಮಾಣವನ್ನು ಹೆಚ್ಚಿಸದಿದ್ದರೆ ನಿರ್ಜಲೀಕರಣದ ಸಮಸ್ಯೆ ಇರಬಹುದು.

ದೇಹಕ್ಕೆ ಹಲವು ರೀತಿಯ ಪೋಷಕಾಂಶಗಳ ಅಗತ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರೋಟೀನ್ ಸೇವನೆಯು ಇತರ ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...