alex Certify ‘ಬಾಹುಬಲಿ’ ಸಮೋಸ ತಿಂದವರಿಗೆ ಬರೋಬ್ಬರಿ 71,000 ರೂ. ಬಹುಮಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಾಹುಬಲಿ’ ಸಮೋಸ ತಿಂದವರಿಗೆ ಬರೋಬ್ಬರಿ 71,000 ರೂ. ಬಹುಮಾನ….!

ಆಹಾರ ತಿನ್ನುವ ಸ್ಪರ್ಧೆ ಏರ್ಪಡಿಸುವುದು ಹೊಸದೇನು ಅಲ್ಲ. ಈಗಾಗಲೇ ಇಂತಹ ಹಲವು ಸ್ಪರ್ಧೆಗಳು ನಡೆದಿದ್ದು, ಇದೀಗ ಆಹಾರಪ್ರಿಯರಿಗೆ ಮತ್ತೊಂದು ಸವಾಲು ಎದುರಾಗಿದೆ. ಉತ್ತರ ಪ್ರದೇಶದ ಸಿಹಿ ತಿಂಡಿ ಅಂಗಡಿ ಮಾಲೀಕರೊಬ್ಬರು ಈ ಸವಾಲನ್ನು ಹಾಕಿದ್ದಾರೆ.

ಮೀರತ್ ನ ಲಾಲ್ ಕುರ್ತಿ ಮೂಲದ ಕೌಶಲ್ ಸ್ವೀಟ್ಸ್ ಮಾಲೀಕ ಶುಭಂ ಕೌಶಲ್ ಈಗ ‘ಬಾಹುಬಲಿ’ ಸಮೋಸವನ್ನು ತಿನ್ನುವ ಸವಾಲು ಒಡ್ಡಿದ್ದು, 12 ಕೆಜಿ ತೂಕ ಹೊಂದಿರುವ ಈ ಸಮೋಸವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದವರಿಗೆ 71,000 ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಈ ಬಾಹುಬಲಿ ಸಮೋಸವನ್ನು ಮೂರು ಮಂದಿ ತಯಾರಿಸುತ್ತಿದ್ದು, ಇದಕ್ಕಾಗಿ 6 ಗಂಟೆ ಸಮಯ ಬೇಕಾಗುತ್ತದೆ. ಎಣ್ಣೆಯಲ್ಲಿ ಕರೆಯೋದಕ್ಕೆ ಸುಮಾರು 90 ನಿಮಿಷ ತೆಗೆದುಕೊಳ್ಳುತ್ತದೆ ಎನ್ನಲಾಗಿದ್ದು, ಈ ಬಾಹುಬಲಿ ಸಮೋಸ ತಿನ್ನುವ ಸವಾಲು ಸ್ವೀಕರಿಸಿ ಗೆಲವು ಸಾಧಿಸಿದವರಿಗೆ 71,000 ರೂಪಾಯಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...