ನಿಮ್ಮ ಜೀರ್ಣಕ್ರಿಯೆ ಹದಗೆಟ್ಟಿದ್ದರೆ ಹೊಟ್ಟೆಯಲ್ಲಿ ಮಲಬದ್ಧತೆ, ಅನಿಲ ಸಮಸ್ಯೆ ಕಾಡುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಮಾತ್ರ ನೀವು ಫಿಟ್ ಆಗಿ ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿರಲು ಈ ಹಣ್ಣುಗಳನ್ನು ಸೇವಿಸಿ.
ಜೀರ್ಣ ಕ್ರಿಯೆ ಉತ್ತಮವಾಗಿರಲು ಪ್ರತಿದಿನ ಪಪ್ಪಾಯವನ್ನು ಸೇವಿಸಿ. ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಇದರಲ್ಲಿರುವ ಪಪೈನ್ ಎಂಬ ಜೀರ್ಣಕಾರಿ ಕಿಣ್ವ ದಿನವಿಡೀ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಸಹಾಯ ಮಾಡುತ್ತದೆ.
ಸೇಬು ಜೀರ್ಣಕ್ರಿಯೆಗೆ ತುಂಬಾ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿದೆ. ಇದರಲ್ಲಿ ಪೊಟ್ಯಾಶಿಯಂ, ಫೈಬರ್ ಹೇರಳವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಬಾಳೆಹಣ್ಣನ್ನು ತಿನ್ನಿ. ಇದರಲ್ಲಿ ಹೆಚ್ಚಿನ ಫೈಬರ್ ಇದ್ದು, ಇದು ಕರುಳಿನ ಚಲನೆಗೆ ಸಹಕಾರಿಯಾಗಿದೆ.