ಪ್ರತಿಯೊಬ್ಬರು ತಾವು ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅಂತವರು ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು. ಹಾಗೂ ಕೂದಲಿಗೆ ಉತ್ತಮವಾದ ಪೋಷಕಾಂಶಗಳನ್ನು ಒದಗಿಸಬೇಕು. ಅದಕ್ಕಾಗಿ ಈ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ.
*ಮೆಂತ್ಯೆ : ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸುವುದರಿಂದ ಕೂದಲು ದಪ್ಪವಾಗಿ ಗಟ್ಟಿಮುಟ್ಟಾಗುತ್ತದೆ.
*ಅಗಸೆಬೀಜ : ಇದು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಒಮೆಗಾ-3 ಕೂದಲನ್ನು ಒಳಗಿನಿಂದ ಬಲಪಡಿಸುತ್ತದೆ.
*ಸೊಪ್ಪು : ಸೊಪ್ಪುಗಳು ಕೂದಲಿನ ಬೆಳವಣೆಗೆಗೆ ಪ್ರಯೋಜನಕಾರಿಯಾಗಿದೆ. ಸೊಪ್ಪುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಇದು ಕೂದಲುದುರುವುದನ್ನು ತಡೆಯುತ್ತದೆ.
*ಸೋಯಾಬಿನ್ : ಇದು ಕೂದಲನ್ನು ಹೆಚ್ಚಿಸಿ, ದಪ್ಪವಾಗಿಸಿ ಹೊಳೆಯುವಂತೆ ಮಾಡುತ್ತದೆ.
*ಒಣ ಬೀಜಗಳು : ಬಾದಾಮಿ, ವಾಲ್ ನಟ್ಸ್, ಗೋಡಂಬಿ, ಪಿಸ್ತಾ ಮುಂತಾದ ಒಣ ಬೀಜಗಳಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಇವು ಕೂದಲನ್ನು ಗಟ್ಟಿಯಾಗಿಸುತ್ತದೆ.
*ಕ್ಯಾರೆಟ್ : ಕ್ಯಾರೆಟ್ ನಲ್ಲಿರುವ ಬಿ-7 ಮತ್ತು ಬಯೋಟಿಕ್ ಕೂದಲನ್ನು ಪುನರ್ ಶ್ಚೇತನಗೊಳಿಸುತ್ತದೆ.
*ಸಿಹಿ ಆಲೂಗಡ್ಡೆ : ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕೂದಲನ್ನು ಕಪ್ಪಾಗಿಸುತ್ತದೆ.
*ಧಾನ್ಯಗಳು : ಧಾನ್ಯಗಳಲ್ಲಿ ಕಬ್ಬಿಣ, ಸತು, ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿ.
*ಟೊಮೆಟೊ : ಇದರಲ್ಲಿ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಜೀವಾಣುಗಳನ್ನು ತೆಗೆದು ಹಾಕಲು ಸಹಕಾರಿಯಾಗಿದೆ.
*ಮೊಟ್ಟೆ : ಇದು ಕೂದಲಿಗೆ ಹೊಸ ಜೀವ ನೀಡುತ್ತದೆ. ಇದರಲ್ಲಿರುವ ಪ್ರೋಟೀನ್ ಕೂದಲಿನ ಬೆಳವಣೆಗೆಗೆ ಸಹಕಾರಿ.
*ದಾಲ್ಚಿನ್ನಿ : ಇದನ್ನು ಸೇವಿಸಿದರೆ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದು ಕೂದಲು ಬೆಳೆಯಲು ಸಹಕಾರಿಯಾಗಿದೆ.
*ಸೀಬೆ ಹಣ್ಣು : ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲನ್ನು ಹೆಚ್ಚಿಸುತ್ತದೆ.
*ಸೂರ್ಯಕಾಂತಿ ಬೀಜಗಳು : ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.